ತೀರ್ಥಹಳ್ಳಿ ಮೂಲದ ಶಂಕಿತ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 SEPTEMBER 2023

NEW DELHI : ಐಎಸ್‌ಐಎಸ್‌ ಉಗ್ರ ಸಂಘಟನೆಯ ಶಂಕಿತ (Suspected) ಉಗ್ರ ಅರಾಫತ್‌ ಅಲಿ ಎಂಬಾತನನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವನು.

ಕೀನ್ಯಾ ದೇಶದ ನೈರೋಬಿಯಿಂದ ಅರಾಫತ್‌ ಅಲಿ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಶಂಕಿತ

ಅರಾಫತ್‌ ಅಲಿ 2020ರಿಂದ ತಲೆಮರೆಸಿಕೊಂಡಿದ್ದ. ಐಎಸ್‌ಐಎಸ್‌ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಈ ಸಂಘಟನೆಯ ವಿಚಾರಧಾರೆಯನ್ನು ಭಾರತದಲ್ಲಿರುವ ಯುವಕರಿಗೆ ತಿಳಿಸಿ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದ ಎಂದು ಎನ್‌ಐಎ ತಿಳಿಸಿದೆ. ಈತನ ಪ್ರೇರಣೆಯಿಂದಾಗಿಯೇ ತೀರ್ಥಹಳ್ಳಿಯ ಶಂಕಿತ ಮೊಹಮ್ಮದ್‌ ಶಾರೀಕ್‌ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಪೋಟಕ್ಕೆ ಮುಂದಾಗಿದ್ದ. ಆದರೆ ಮಾರ್ಗ ಮಧ್ಯೆ ಆಟೋದಲ್ಲಿಯೇ ಬಾಂಬ್‌ ಸ್ಪೋಟಗೊಂಡಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2020ರಲ್ಲಿ ಮಂಗಳೂರಿನಲ್ಲಿ ಉಗ್ರ ಸಂಘಟನೆ ಲಷ್ಕರ್‌-ಇ-ತೊಯ್ಬ ಪರವಾಗಿ ಗೋಡೆ ಬರಹ ಪ್ರಕಟಿಸಲಾಗಿತ್ತು. ಶಂಕಿತರಾದ ಮೊಹಮ್ಮದ್‌ ಶಾರೀಕ್‌ ಮತ್ತು ಮಾಜ್‌ ಮುನೀರ್‌ ಈ ಪ್ರಕರಣದ ಆರೋಪಿಗಳು. ಇವರಿಬ್ಬರಿಗು ಅರಾಫತ್‌ ಅಲಿ ಪ್ರೇರಣೆ ನೀಡಿದ್ದ ಎಂಬ ಆರೋಪವು ಇದೆ. ಈ ಹಿನ್ನೆಲೆ ಶಂಕಿತ ಅರಾಫತ್‌ ಅಲಿಯನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment