ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 SEPTEMBER 2023
SHIMOGA : ಹಿಂದೂ ಸಂಘಟನೆಗಳ ಮಹಾಮಂಡಳಿಯ ಗಣಪತಿಯ (GANESH) ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ನಗರದಾದ್ಯಂತ ಅಲಂಕಾರ ಮಾಡಲಾಗಿದೆ. ಶಿವಮೊಗ್ಗ ಸಿಟಿ ಕೇಸರಿಮಯವಾಗಿದೆ.
ಮಹಾದ್ವಾರದ ಮೇಲೆ ಉಗ್ರ ನರಸಿಂಹ
ಗಾಂಧಿ ಬಜಾರ್ ಮುಖ್ಯ ದ್ವಾರದಲ್ಲಿ ಈ ಬಾರಿ ಉಗ್ರ ನರಸಿಂಹನ ಪ್ರತಿಮೆ ಸ್ಥಾಪಿಸಲಾಗಿದೆ. ಉಗ್ರ ನರಸಿಂಹ ಸ್ವಾಮಿಯು ಹಿರಣ್ಯ ಕಶ್ಯಪನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂಹಾರ ಮಾಡಿದ್ದ. ಅದರ ಪ್ರತಿರೂಪವನ್ನು ಚಿತ್ರಿಸಲಾಗಿದೆ.
ಓತಿಘಟ್ಟದಲ್ಲಿರುವ ಜೀವನ್ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್ ಮತ್ತು ಅವರ ತಂಡ ಈ ಬಾರಿಯ ನರಸಿಂಹ ಸ್ವಾಮಿಯ ಉಗ್ರವತಾರದ ಪ್ರತಿಮೆ ನಿರ್ಮಿಸಿದ್ದಾರೆ. ಮೂರು ತಿಂಗಳು 20 ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದರು.
ಮಂಗಳವಾರ ರಾತ್ರಿ ಮಹಾದ್ವಾರದಲ್ಲಿ ಉಗ್ರ ನರಸಿಂಹ ಸ್ವಾಮಿಯ ಪ್ರತಿಮೆ ಸ್ಥಾಪಿಸಲಾಯಿತು. ದೊಡ್ಡ ಸಂಖ್ಯೆಯ ಜನರು ರಾತ್ರಿಯೆ ಪ್ರತಿಮೆ ಮುಂಭಾಗ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯ
ಹಿಂದೂ ಸಂಘಟನೆಗಳ ಮಹಾ ಮಂಡಳದ ಗಣಪತಿ (GANESH) ರಾಜಬೀದಿ ಉತ್ಸವದ ಅಂಗವಾಗಿ ಶಿವಮೊಗ್ಗ ನಗರದಾದ್ಯಂತ ಅಲಂಕಾರ ಮಾಡಲಾಗಿದೆ. ಅಲಂಕಾರ ಸಮಿತಿ ವತಿಯಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಲಂಕಾರದಲ್ಲಿ ತೊಡಿಗಿಸಿಕೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ವಿಶ್ವ ಹಿಂದೂ ಪರಿಷತ್‌ನ ಶೌರ್ಯ ಜಾಗರಣ ರಥ, ಯಾವಾಗ ಬರುತ್ತೆ? ಏನೆಲ್ಲ ಕಾರ್ಯಕ್ರಮ ಇರುತ್ತೆ?
ಗಾಂಧಿ ಬಜಾರ್‌ನಲ್ಲಿ ಸಂಪೂರ್ಣ ಕೇಸರಿ ಬಂಟಿಂಗ್ಸ್ ಕಟ್ಟಲಾಗಿದೆ. ಅಲ್ಲಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಇನ್ನು, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಬಿ.ಹೆಚ್.ರೋಡ್ ಸೇರಿದಂತೆ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ಕೇಸರಿ ಬಂಟಿಂಗ್ಸ್, ಧ್ವಜಗಳು ರಾರಾಜಿಸುತ್ತಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422