ಕಲ್ಲು ತೂರಾಟ ವೇಳೆ ರಾಗಿಗುಡ್ಡಕ್ಕೆ ಬಂದಿದ್ದ ಎರಡು ಓಮ್ನಿ ಕಾರು ಪತ್ತೆ, ವಿಚಾರಣೆ ಬಳಿಕ ಕಾರಿನಲ್ಲಿದ್ದವರಿಗೆ ರಿಲೀಫ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 OCTOBER 2023

SHIMOGA : ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣದ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ್ದ ಎರಡು ಓಮ್ನಿ ಕಾರುಗಳ (Omni car) ಕುರಿತು ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿಯು ವರದಿಯಾಗಿತ್ತು. ಕೂಡಲೆ ಓಮ್ನಿ ಕಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು ಯುವಕರ ವಿಚಾರಣೆ ನಡೆಸಿದ್ದಾರೆ.

ಓಮ್ನಿ ಕಾರಿನಲ್ಲಿದ್ದವರು ದಾವಣಗೆರೆ ಜಿಲ್ಲೆಯ ನ್ಯಾಮತಿ ಮೂಲಕದವರು ಎಂದು ತಿಳಿದು ಬಂದಿದೆ. ಶಿವಮೊಗ್ಗದಿಂದ ತಮ್ಮ ಊರಿಗೆ ತೆರಳುವ ಮಾರ್ಗ ಮಧ್ಯೆ ಮೆರವಣಿಗೆ ನೋಡಲು ರಾಗಿಗುಡ್ಡಕ್ಕೆ ಬಂದಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ- ರಾಗಿಗುಡ್ಡ ಘಟನೆ ಬಗ್ಗೆ ವಾಟ್ಸಪ್‌ನಲ್ಲಿ ಫೋಟೊ, ವಿಡಿಯೋ ಷೇರ್‌ ಮಾಡುವಾಗ ಹುಷಾರ್‌, ಒಬ್ಬನ ವಿರುದ್ಧ ದಾಖಲಾಯ್ತು ಕೇಸ್‌

ಒಂದು ಓಮ್ನಿ ಕಾರಿನಲ್ಲಿ (Omni car) ಒಂದೇ ಸಮುದಾಯದ ಯುವಕರು ಇದ್ದರು. ಮತ್ತೊಂದು ಕಾರಿನಲ್ಲಿ ಎರಡು ಸಮುದಾಯದ ಯುವಕರು ಇದ್ದರು. ಈ ಪೈಕಿ ಕೆಲವರು ವಿದ್ಯಾರ್ಥಿಗಳು. ಕಾರಿನಲ್ಲಿದ್ದವರಿಗೆ ಯಾವುದೆ ಅಪರಾಧ ಹಿನ್ನೆಲೆ ಇಲ್ಲ. ನ್ಯಾಮತಿ ಠಾಣೆ ಪೊಲೀಸರು ಕೂಡ ಯುವಕರ ವಿಚಾರಣೆ ನಡೆಸಿದ್ದಾರೆ. ಇವರಿಗು ಪ್ರಕರಣಕ್ಕು ಯಾವುದೆ ಸಂಬಂಧವಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 4, 2023

Leave a Comment