SHIVAMOGGA LIVE NEWS | 4 OCTOBER 2023
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣದ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ್ದ ಎರಡು ಓಮ್ನಿ ಕಾರುಗಳ (Omni car) ಕುರಿತು ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿಯು ವರದಿಯಾಗಿತ್ತು. ಕೂಡಲೆ ಓಮ್ನಿ ಕಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು ಯುವಕರ ವಿಚಾರಣೆ ನಡೆಸಿದ್ದಾರೆ.
ಓಮ್ನಿ ಕಾರಿನಲ್ಲಿದ್ದವರು ದಾವಣಗೆರೆ ಜಿಲ್ಲೆಯ ನ್ಯಾಮತಿ ಮೂಲಕದವರು ಎಂದು ತಿಳಿದು ಬಂದಿದೆ. ಶಿವಮೊಗ್ಗದಿಂದ ತಮ್ಮ ಊರಿಗೆ ತೆರಳುವ ಮಾರ್ಗ ಮಧ್ಯೆ ಮೆರವಣಿಗೆ ನೋಡಲು ರಾಗಿಗುಡ್ಡಕ್ಕೆ ಬಂದಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ- ರಾಗಿಗುಡ್ಡ ಘಟನೆ ಬಗ್ಗೆ ವಾಟ್ಸಪ್‌ನಲ್ಲಿ ಫೋಟೊ, ವಿಡಿಯೋ ಷೇರ್ ಮಾಡುವಾಗ ಹುಷಾರ್, ಒಬ್ಬನ ವಿರುದ್ಧ ದಾಖಲಾಯ್ತು ಕೇಸ್
ಒಂದು ಓಮ್ನಿ ಕಾರಿನಲ್ಲಿ (Omni car) ಒಂದೇ ಸಮುದಾಯದ ಯುವಕರು ಇದ್ದರು. ಮತ್ತೊಂದು ಕಾರಿನಲ್ಲಿ ಎರಡು ಸಮುದಾಯದ ಯುವಕರು ಇದ್ದರು. ಈ ಪೈಕಿ ಕೆಲವರು ವಿದ್ಯಾರ್ಥಿಗಳು. ಕಾರಿನಲ್ಲಿದ್ದವರಿಗೆ ಯಾವುದೆ ಅಪರಾಧ ಹಿನ್ನೆಲೆ ಇಲ್ಲ. ನ್ಯಾಮತಿ ಠಾಣೆ ಪೊಲೀಸರು ಕೂಡ ಯುವಕರ ವಿಚಾರಣೆ ನಡೆಸಿದ್ದಾರೆ. ಇವರಿಗು ಪ್ರಕರಣಕ್ಕು ಯಾವುದೆ ಸಂಬಂಧವಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
LATEST NEWS
- ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?

- ಭದ್ರಾವತಿಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕಾಲಿನ ಮೂಳೆ, ಕೈ ಬೆರಳು ಕಟ್, ಆರೋಪಿ ಕಾಲಿಗೆ ಗುಂಡೇಟು

- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

About The Editor
ನಿತಿನ್ ಆರ್.ಕೈದೊಟ್ಲು






