ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 OCTOBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಸವಳಂಗ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯರು ಕೆಲವು ಸಮಸ್ಯೆಗಳ ಕುರಿತು ಸಂಸದರ ಗಮನ ಸೆಳೆದರು.
ಉಷಾ ನರ್ಸಿಂಗ್ ಹೋಂ ಸಮೀಪ ಸವಳಂಗ ರಸ್ತೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪರಿಶೀಲಸಿ, ಪ್ರಗತಿ ಕುರಿತು ಸಂಸದ ರಾಘವೆಂದ್ರ ಮಾಹಿತಿ ಪಡೆದರು. ಇದೆ ವೇಳೆ ಮಾಧ್ಯಮಗಳ ಜೊತೆ ಸಂಸದ ರಾಘವೇಂದ್ರ ಮಾತನಾಡಿದರು.
ಸಂಸದ ರಾಘವೇಂದ್ರ ಹೇಳಿದ 3 ಪ್ರಮುಖಾಂಶ
ಪಾಯಿಂಟ್ 1 : ಭವಿಷ್ಯದಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಸವಳಂಗ ರಸ್ತೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ, ಸೋಮಿನಕೊಪ್ಪ ಮತ್ತು ಪಿ ಅಂಡ್ ಟಿ ಕಾಲೋನಿಯಲ್ಲಿ 27 ಕೋಟಿ ರೈಲ್ವೆ ಓವರ್ ಬ್ರಿಡ್ಜ್ ಮತ್ತು ಅಂಡರ್ ಬ್ರಿಡ್ಜ್, ಭದ್ರಾವತಿ ಕಡದಕಟ್ಟೆಯಲ್ಲಿ 26 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ, ವಿದ್ಯಾನಗರದಲ್ಲಿ ವೃತ್ತಾಕಾರದ 43 ಕೋಟಿ ರೂ. ವೆಚ್ಚದ ಮೇಲ್ಸೇತುವೆ ನಿರ್ಮಾಣ ಕಾರ್ಯವಾಗುತ್ತಿದೆ.
ಪಾಯಿಂಟ್ 2 : ಡಿಸೆಂಬರ್ ವೇಳೆಗೆ ಇವೆಲ್ಲ ಸೇತುವೆಗಳು ಉದ್ಘಾಟನೆಯಾಗಲಿದೆ. ಸವಳಂಗ ರಸ್ತೆಯ ಸೇತುವೆ ಕಾಮಗಾರಿ ಕುರಿತು ಸ್ಥಳೀಯರು ಕೆಲವು ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಮುಖ್ಯ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿದ ಕಾಮಗಾರಿಯಲ್ಲಿ ಕೆಲವು ಮಾರ್ಪಾಡು ಮಾಡಲಾಗುತ್ತದೆ.
ಪಾಯಿಂಟ್ 3 : ಈ ಹಿಂದೆ ಯೋಜನೆ ರೂಪಿಸಲು ಒಂದು ಸರ್ಕಾರ, ಟೆಂಡರ್ ಕರೆಯುವುದು ಮತ್ತೊಂದು ಸರ್ಕಾರ, ಕಾಮಗಾರಿ ಉದ್ಘಾಟನೆ ಹೊತ್ತಿಗೆ ಇನ್ನೊಂದು ಸರ್ಕಾರ ಇರುತ್ತಿತ್ತು. ಆದರೆ ಒಂದೇ ಸರ್ಕಾರದ ಅವಧಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಪೂರ್ಣಗೊಂಡಿರುವುದು ದಾಖಲೆ.
ಇದನ್ನೂ ಓದಿ – ದಸರಾ ರಜೆ, ಪ್ರಯಾಣಿಕರ ಅನುಕೂಲಕ್ಕಾಗಿ KSRTCಯಿಂದ ವಿಶೇಷ ವ್ಯವಸ್ಥೆ