ಮೈಸೂರಿಗೆ ತೆರಳಿದ್ದ ಉಪನ್ಯಾಸಕಿಗೆ ಎದುರು ಮನೆಯವರಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

SHIVAMOGGA LIVE NEWS | 30 OCTOBER 2023

SHIMOGA : ಕೌಟುಂಬಿಕ ಕಾರ್ಯಕ್ರಮಕ್ಕೆ ಮೈಸೂರಿಗೆ ತೆರಳಿದ್ದ ಸಹ್ಯಾದ್ರಿ ಕಾಲೇಜು ಪ್ರೊಫೆಸರ್‌ (lecturer) ಒಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ನಗರದ ಎಂ.ಸಿ.ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ.

Tunga-Nagara-Police-Station-Shimoga

ಸಹ್ಯಾದ್ರಿ ಕಾಲೇಜು ಪ್ರೊಫೆಸರ್‌ ಪವಿತ್ರಾ ಅವರು ತಮ್ಮ ಕುಟುಂಬದ ಕಾರ್ಯಕ್ರಮಕ್ಕಾಗಿ ಅ.24ರಂದು ಮೈಸೂರಿಗೆ ತೆರಳಿದ್ದರು. ಅ.26ರಂದು ಎದುರು ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲು ತೆರೆದುಕೊಂಡಿದೆ. ಆಯುಧದಿಂದ ಮೀಟಿದಂತೆ ಕಾಣುತ್ತಿದೆ ಎಂದು ತಿಳಿಸಿದ್ದರು. ತಾವು ಬರುವವರೆಗೆ ಬಾಗಿಲಿಗೆ ಬೀಗ ಹಾಕಿರುವಂತೆ ಪವಿತ್ರಾ ಅವರು ಎದುರು ಮನೆಯವರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ- ಶಿವಮೊಗ್ಗ ಜೈಲ್‌ ಮೇಲೆ ದಾಳಿ, ಗಾರ್ಡನ್‌ನಲ್ಲಿ ಸಿಕ್ತು ಮೊಬೈಲ್‌, ಮಂಗಳೂರು ಬೀಡಿ, ಇನ್ನು ಏನೇನೆಲ್ಲ ಪತ್ತೆಯಾಯ್ತು?

ಮೈಸೂರಿನಿಂದ ಮರಳಿದ ಬಳಿಕ ಪವಿತ್ರಾ ಅವರು ಪರಿಶೀಲಿಸಿದಾಗ ಮನೆಯ ಕಬೋರ್ಡ್‌ನ ಲಾಕರ್‌ ಒಡೆದು ಕಳವು ಮಾಡಿರುವುದು ಗೊತ್ತಾಗಿದೆ. ಚಿನ್ನ ಮತ್ತು ಬೆಳ್ಳಿ ವಸ್ತುಗಳು ಮತ್ತು ಆಭರಣ ಕಳುವಾಗಿದೆ. ಇವುಗಳ ಅಂದಾಜು ಮೌಲ್ಯ 1.17 ಲಕ್ಷ ರೂ. ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

Leave a Comment