3 ಕ್ಯಾಮರಾ ಬಾಡಿಗೆಗೆ ಪಡೆದ, 7 ದಿನವಾದರು ಮರಳಲಿಲ್ಲ, ಮನೆ ಬಳಿ ಹೋದ ಫೋಟಗ್ರಾಫರ್‌ಗೆ ಕಾದಿತ್ತು ಆಘಾತ

SHIVAMOGGA LIVE NEWS | 3 NOVEMBER 2023 (ಈ ಸುದ್ದಿಯನ್ನು ಇನ್ನು 53 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಫೋಟೊಗ್ರಾಫರ್‌ ಒಬ್ಬರಿಂದ ಮೂರು ಕ್ಯಾಮರಾಗಳನ್ನು (Camera) ಬಾಡಿಗೆಗೆ ಪಡೆದ ವ್ಯಕ್ತಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.

ಬುದ್ದ ನಗರದ ಫೋಟೊಗ್ರಾಫರ್‌ ರುದ್ರೇಶ್‌ ಬಳಿ ಕೆನಾನ್‌ 200ಡಿ, ಕೆನಾನ್‌ 1200ಡಿ ಮತ್ತು ನಿಕಾನ್‌ 7500 ಕ್ಯಾಮರಾಗಳಿದ್ದವು. ಅ.10ರಂದು ಪವನ್‌ ಎಂಬಾತ 7 ದಿನಕ್ಕೆ ಕ್ಯಾಮರಾ ಬಾಡಿಗೆಗೆ ಬೇಕು ಎಂದು ಕೇಳಿದ್ದ. ಆತನ ಆಧಾರ್‌ ಕಾರ್ಡ್‌ ಪಡೆದು 15 ಸಾವಿರ ರೂ.ಗೆ ಕ್ಯಾಮರಾಗಳನ್ನು ಬಾಡಿಗೆಗೆ ನೀಡಿದ್ದರು. 7 ದಿನದ ಬಳಿಕ ಕರೆ ಮಾಡಿದಾಗ ಪವನ್‌ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ಇದನ್ನೂ ಓದಿ –  ಪರಿಚಿತ ಅಂತಾ ಇನ್ನೋವಾ ಕಾರು ಕೊಟ್ಟರು, ಆಮೇಲೆ ಕಾರು ಇಲ್ಲ, ವ್ಯಕ್ತಿನೂ ಇಲ್ಲ, GPS ಚೆಕ್‌ ಮಾಡಿದಾಗ ಶಾಕ್

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಮನೆ ಬಳಿ ತೆರಳಿದಾಗಲು ಪವನ್‌ ಸುಳಿವು ಸಿಗಲಿಲ್ಲ. ಇದೆ ರೀತಿ ಪವನ್ ಹಲವರಿಂದ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ವಂಚಿಸಿದ್ದಾನೆ ಎಂದು ಆತನ ತಂದೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ರುದ್ರೇಶ್‌ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಜೈಲ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್‌ ಕಸಿದು ಪರಾರಿ

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Doddapete-Police-Station.

Leave a Comment