SHIVAMOGGA LIVE NEWS | 12 NOVEMBER 2023 ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
BYKODU : ನಿರ್ಮಾಣ ಹಂತದ ಸಿಗಂದೂರು ಸೇತುವೆ (Bridge) ಮೇಲಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಮೃತಪಟ್ಟಿದ್ದಾನೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ.
ಸಿಗಂದೂರು ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬಿಲ್ಡ್ ಕಂಪನಿ ಕಾರ್ಮಿಕ, ಪಶ್ಚಿಮ ಬಂಗಾಳದ ಮುರ್ಸಿದಾಬಾದ್ ಜಿಲ್ಲೆಯ ರಬಿಉಲ್ ಇಸ್ಮಾಯಿಲ್ (42) ಮೃತಪಟ್ಟವರು. ನಿರ್ಮಾಣ ಹಂತದ ಸೇತುವೆ ಮೇಲಿಂದ ಬಿದ್ದು ಗಾಯಗೊಂಡಿದ್ದರು. ತುರ್ತು ಚಿಕಿತ್ಸೆಗಾಗಿ ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಇಸ್ಮಾಯಿಲ್ ಸಹೋದರ ತಾರ್ಜಿನ್ ಅಲಿ ದೂರು ನೀಡಿದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ಕಡೆ ಪಟಾಕಿ ಮಾರಾಟ, ಈ ಬಾರಿ ಹೇಗಿದೆ ವ್ಯವಸ್ಥೆ?
