ಹಣಗೆರೆಗೆ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಕಾರು | ಹಬ್ಬ ಮುಗಿಸಿ ಹಿಂತಿರುಗಿದ ಯುವಕನಿಗೆ ಕಾದಿತ್ತು ಶಾಕ್ – ಫಟಾಫಟ್‌ ನ್ಯೂಸ್

Published On : ನವೆಂಬರ್ 22, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 22 NOVEMBER 2023

ಪೋಸ್ಟ್‌ ಮ್ಯಾನ್‌ ಬೈಕ್‌ ಕಳ್ಳತನ‌

FATAFAT-NEWS-1SHIMOGA : ಮನೆ ಮುಂದೆ ನಿಲ್ಲಿಸಿದ್ದ ಹೀರೋ ಹೋಂಡ ಬೈಕ್‌ ಅನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಜಿಎಸ್‌ಕೆಎಂ ರಸ್ತೆಯಲ್ಲಿ 4ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಪೋಸ್ಟ್‌ ಮ್ಯಾನ್‌ ಗಣೇಶ್‌ ಅವರು ಬೈಕ್‌ ಕಳುವಾಗಿದೆ. ಗಣೇಶ್‌ ಅವರ ಸ್ನೇಹಿತ ದರ್ಶನ್‌ ಅವರು ಬೈಕ್‌ ಕೊಂಡೊಯ್ದಿದ್ದರು. ರಾತ್ರಿ ಮನೆ ಬಳಿ ನಿಲ್ಲಿಸಿದ್ದ ಬೈಕ್‌ ಬೆಳಗ್ಗೆ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ನಂತರ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ –  ಶಿವಮೊಗ್ಗ ವಿಮಾನ ನಿಲ್ದಾಣ, ಒಂದೇ ದಿನ 400 ಮಂದಿ ಪ್ರಯಾಣ, ಎಲ್ಲೆಲ್ಲಿಗೆ ಎಷ್ಟು ಜನ ತೆರಳಿದರು?

ಹಬ್ಬ ಮುಗಿಸಿ ಊರಿನಿಂದ ಹಿಂತಿರುಗಿದ ಯುವಕನಿಗೆ ಶಾಕ್

FATAFAT-NEWS-2SHIMOGA : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿದ್ದಾಗ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ನಗರದ ಅಶ್ವಥ ನಗರದ 8ನೇ ಅಡ್ಡರಸ್ತೆಯಲ್ಲಿ ಪ್ರದೀಪ್‌ ಎಂಬುವವರ ಬೈಕ್‌ ಕಳುವಾಗಿದೆ. ಕೆಲಸ ಮುಗಿಸಿ ಬಂದು ರಾತ್ರಿ ಮನೆ ಕೆಳಗೆ ಬೈಕ್‌ ನಿಲ್ಲಿಸಿದ್ದರು. ದೀಪಾವಳಿ ಹಬ್ಬಕ್ಕೆ ಉರಿಗೆ ತೆರಳಿದ್ದರು. ನ.19ರಂದು ಮರಳಿದಾಗ ಬೈಕ್‌ ನಾಪತ್ತೆಯಾಗಿತ್ತು. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Live Reach

ಹಣಗೆರೆಗೆ ತೆರಳುತ್ತಿದ್ದಾಗ ಅಪಘಾತ

FATAFAT-NEWS-3AYANURU : ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬ ಇದ್ದ ಕಾರಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಸಿರಿಗೆರೆಯಿಂದ ಮುಂದೆ ಇರುವ ತಿರುವಿನಲ್ಲಿ ಘಟನೆ ಸಂಭವಿಸಿದೆ. ದಾವಣಗೆರೆಯಿಂದ ಕುಟುಂಬವೊಂದು ಇಕೋ ಕಾರಿನಲ್ಲಿ ಹಣಗೆರೆ ಕಟ್ಟೆಗೆ ಆಗಮಿಸಿತ್ತು. ಎದುರಿನಿಂದ ಬಂದ ಮಾರುತಿ ಓಮ್ನಿ ಕಾರು ಇಕೋ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಕೋ ಕಾರಿನಲ್ಲಿದ್ದ 9 ಮಂದಿ ಗಾಯಗೊಂಡಿದ್ದಾರೆ. ಓಮ್ನಿ ಕಾರಿನಲ್ಲಿ ಚಾಲಕನಿಗು ಗಾಯವಾಗಿದೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಕೆಲಸೂರಿನಲ್ಲಿ ಚಿರತೆಗಳು ಪ್ರತ್ಯಕ್ಷ, ಮನೆಯಿಂದ ಹೊರ ಬರಲು ಗ್ರಾಮಸ್ಥರಿಗೆ ಆತಂಕ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ನವೆಂಬರ್ 22, 2023

Leave a Comment