ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 NOVEMBER 2023
BYKODU : ಕೊಟ್ಟಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡನವಳ್ಳಿಯ ಗಣಪತಿ ಎಂಬುವವರ ಅವರ ಕೊಟ್ಟಿಗೆಯಲ್ಲಿ ಘಟನೆ (Incident) ಸಂಭವಿಸಿದೆ.
ಹೇಗಾಯ್ತು ಘಟನೆ? ಏನೇನೆಲ್ಲ ನಷ್ಟವಾಗಿದೆ?
ಗಣಪತಿ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಟ್ಟದಲ್ಲಿ ಸಂಗ್ರಹಿಸಿ ಇಟ್ಟಿದ್ದ 200 ಪಿಂಡಿ ಹುಲ್ಲು, ತಾಮ್ರದ ಹಂಡೆ, ಲಕ್ಷಾಂತರ ಮೌಲ್ಯದ ನಾಟಾ, ಓಮ್ನಿ ಕಾರು, ಪೈಪ್, ಕಟ್ಟಿಗೆ ಸೇರಿದಂತೆ ಸುಮಾರು 6 ರಿಂದ 7 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಒಡ್ಡಿಕೊಪ್ಪ ಸಮೀಪ ವೀಲಿಂಗ್ ಮಾಡಿದ್ದ ವಿಡಿಯೋ ವೈರಲ್, ಆಮೇಲೆ ಆಗಿದ್ದೇನು?
ಬೆಂಕಿ ಆರಿಸುವ ಸಂದರ್ಭ ಗಣಪತಿ ಅವರಿಗೆ ಶಾಖ ತಗುಲಿ ಸಣ್ಣಪುಟ್ಟ ಗಾಯಗಾಗಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಇನ್ನು, ವಿಷಯ ತಿಳಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋದಂಡಪ್ಪ, ಗ್ರಾಮ ಲೆಕ್ಕಾಧಿಕಾರಿ ಸೇರಿ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422