ಗೋ ಪೂಜೆ ಸಂದರ್ಭ ಚಿನ್ನದ ಸರ ನುಂಗಿದ ಹಸು, ಶಸ್ತ್ರಚಿಕಿತ್ಸೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 NOVEMBER 2023

HOSANAGARA : ಗೋಪೂಜೆ ಸಂದರ್ಭ ಹಸುವೊಂದು (Cow) ಚಿನ್ನದ ಸರ ನುಂಗಿದ್ದು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ. ಹೊಸನಗರ ತಾಲೂಕು ಮತ್ತಿಮನೆ ಗ್ರಾಮದಲ್ಲಿ ಘಟನೆ ನಡೆದಿದೆ.

ವಿನಾಯಕ ಉಡುಪ ಅವರ ಸಹೋದರ ಶ್ಯಾಮ್‌ ಉಡುಪ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಈಚೆಗೆ ಗೋ ಪೂಜೆ ಸಂದರ್ಭ ಪೂಜೆಗೆ ಇಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು. ಎಲ್ಲಡೆ ಹುಡುಕಿದ ಬಳಿಕ ಮನೆಯಲ್ಲಿನ ಹಸು (Cow) ನುಂಗಿದೆ ಎಂದು ಕುಟುಂಬದವರು ಖಚಿತಪಡಿಸಿಕೊಂಡಿದ್ದರು.

ಇದನ್ನೂ ಓದಿ- BREAKING NEWS – ಕೋಟೆ ಮಾರಿಕಾಂಬ ದೇವಿ ಜಾತ್ರೆ ದಿನಾಂಕ ಫಿಕ್ಸ್, ಅಧಿಕೃತ ಪ್ರಕಟ

ಚಿನ್ನದ ಸರ ನುಂಗಿದಾಗಿನಿಂದ ಹಸು ಸರಿಯಾಗಿ ಮೇವು ತಿನ್ನುತ್ತಿರಲಿಲ್ಲ ಎನ್ನಲಾಗಿದೆ. ಆತಂಕಗೊಂಡ ಕುಟುಂಬದವರು ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ಆನಂದ ಅವರಿಗೆ ಮಾಹಿತಿ ನೀಡಿದ್ದರು. ಭಾನುವಾರ ಶಸ್ತ್ರಚಿಕಿತ್ಸೆ ನಡೆಸಿ ಚಿನ್ನದ ಸರವನ್ನು ಹೊರತೆಗೆಯಲಾಗಿದೆ. ಹಸು ಮೆಲುಕು ಹಾಕಿ ಜಗಿಯುವಾಗ ಸರ ತುಂಡಾಗಿ ಚೂಪಾಗಿತ್ತು. ಇದು ಹಸುವಿನ ದೇಹದ ರೆಟಿಕ್ಯುಲಮ್‌ ಭಾಗದಲ್ಲಿ ಸಿಲುಕಿತ್ತು ಎನ್ನಲಾಗಿದೆ. ಸರ ಚೂಪಾಗಿದ್ದರಿಂದ ಗಾಯವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಯಶಸ್ವಿ ಚಿಕಿತ್ಸೆ ಮೂಲಕ ಸರವನ್ನು ಹೊರತೆಗೆಯಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment