ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 6 DECEMBER 2023
SHIRALAKOPPA : ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರಿಂದ ಶ್ರೀಗಂಧ ಮತ್ತು ಗರಗಸ ವಶಕ್ಕೆ ಪಡೆಯಲಾಗಿದೆ.
ಶಿರಾಳಕೊಪ್ಪದ ಸಮೀಪದ ಬಸವನಂದಿಹಳ್ಳಿ ವ್ಯಾಪ್ತಿಯ ಹುಲಿಗಿನ ಕೊಪ್ಪ ಅರಣ್ಯ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗದ ಮೈಲಾರಿ ಮತ್ತು ಮಂಜುನಾಥ್ ಬಂಧಿತರು. ಅವರಿಂದ 26 ಕೆ.ಜಿ. ಶ್ರೀಗಂಧ, 2 ಕೈ ಗರಗಸ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ – BREAKING NEWS – ಶಿಕಾರಿಪುರದಲ್ಲಿ ಪೊಲೀಸ್ ಠಾಣೆ ಮುಂದೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ
ಡಿಸಿಎಫ್ ಸಂತೋಷ್ ಕುಮಾರ್, ಎಸಿಎಫ್ ಸುರೇಶ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಶಗುಪ್ತ ಎ ಶೇಕ್,ಉಪ ವಲಯ ಅರಣ್ಯ ಅಧಿಕಾರಿ ಅಕ್ಷಯ್ ಕುಮಾರ್, ಪ್ರಸನ್ನ , ಮಲ್ಲಪ್ಪ, ಗಸ್ತು ಅರಣ್ಯ ಪಾಲಕ ಶಿವಶರಣ, ಲತೀಫ್ ಹಾಗೂ ಸಿಬ್ಬಂದಿ ಅರುಣ್ ಉಜ್ಜಪ್ಪ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
LATEST NEWS
- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

About The Editor
ನಿತಿನ್ ಆರ್.ಕೈದೊಟ್ಲು















