ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 DECEMBER 2023
ಶಿವಮೊಗ್ಗದಲ್ಲಿ ರೈಲ್ವೆ ಹಿತರಕ್ಷಣಾ ಸಭೆ
SHIMOGA : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಡಿ.8ರ ಸಂಜೆ 6ಕ್ಕೆ ನೈಋತ್ಯ ರೈಲ್ವೆ (Railway) ಬಳಕೆದಾರರ ಹಿತರಕ್ಷಣಾ ಸಭೆ ಏರ್ಪಡಿಸಲಾಗಿದೆ. ನೈಋತ್ಯ ರೈಲ್ವೆ ಸಲಹಾ ಸಮಿತಿ ಹುಬ್ಬಳ್ಳಿ ವಲಯದ ಸದಸ್ಯ ಕೆ.ವಿ ವಸಂತ್ ಕುಮಾರ್, ಜಿಲ್ಲಾ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಸ್.ಎಸ್.ಉದಯಕುಮಾರ್ ಹಾಗೂ ನಾಗರಾಜ್ ಗೊರೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರೈಲ್ವೆ ಬಳಕೆದಾರರು ಮತ್ತು ಸಾರ್ವಜನಿಕರು ರೈಲ್ವೆಗೆ ಸಂಬಂಧಿಸಿದ ಕುಂದುಕೊರತೆಗಳು, ರೈಲ್ವೆ (Railway) ಅಭಿವೃದ್ಧಿ ವಿಚಾರದಲ್ಲಿ ಅಹವಾಲು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ- ವಿಜಯೇಂದ್ರ ‘ಪುಢಾರಿʼ ಹೇಳಿಕೆಗೆ ಶಿಕಾರಿಪುರದಲ್ಲಿ ಆಕ್ರೋಶ, ಕ್ಷಮೆಗೆ ಪಟ್ಟು
ಎರಡು ತಿಂಗಳು ಮಸಾಜ್ ತರಬೇತಿ
SHIMOGA : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಿಂದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕ, ಯುವತಿಯರಿಗೆ ಮಸಾಜ್ ಬಗ್ಗೆ ಎರಡು ತಿಂಗಳ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ದೂ.08182-223230 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422