ಅಶ್ಲೀಲ ವಿಡಿಯೋ, ಮಹಿಳೆಗೆ ಬೆದರಿಕೆ | ಅಡವಿಟ್ಟ ಬೈಕ್‌ ಮರಳಿ ಕೇಳಿದ್ದಕ್ಕೆ ಹಲ್ಲೆ | ಕ್ರೈಮ್‌ ನ್ಯೂಸ್‌ ಫಟಾಫಟ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 20 DECEMBER 2023

ಕೆಲಸಕ್ಕೆ ರೆಡಿಯಾಗಿ ಮನೆ ಹೊರ ಬಂದಾಗ‌ ಕಾದಿತ್ತು ಆಘಾತ

FATAFAT-NEWS-1SHIMOGA : ಮನೆ ಮುಂದೆ ನಿಲ್ಲಿಸಿದ್ದ ಸುಜುಕಿ ಸಮುರಾಯ್‌ ಬೈಕ್‌ ಕಳ್ಳತನವಾಗಿದೆ ಎಂದು ಆರೋಪಿಸಿ ಜೋಸೆಫ್‌ ನಗರದ ಆನಂದ್‌ ಎಂಬುವವರು ದೂರು ನೀಡಿದ್ದಾರೆ. ಡಿ.15ರ ರಾತ್ರಿ ಮನೆ ಮುಂದೆ ಬೈಕ್‌ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಕೆಲಸಕ್ಕೆ ಹೋಗಲೆಂದು ಮನೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಆನಂದ್‌ ಅವರು ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಡವಿಟ್ಟ ಬೈಕ್‌ ಮರಳಿ ಕೇಳಿದ್ದಕ್ಕೆ ಹಲ್ಲೆ

FATAFAT-NEWS-2SHIMOGA : ಸಾಲದ ಹಣ ಹಿಂತಿರುಗಿಸಿದ್ದು ಅಡವಿಟ್ಟ ಬೈಕ್‌ ಮರಳಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಚಾಲಕ ರಾಜೇಶ್‌ ಶೆಟ್ಟಿ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ರಾಜೇಶ್‌ ಶೆಟ್ಟಿ ತಮ್ಮ ಪರಿಚಿತ ವ್ಯಕ್ತಿಯೊಬ್ಬರ ಬಳಿ ಬೈಕ್‌ ಅಡವಿಟ್ಟು 40 ಸಾವಿರ ರೂ. ಸಾಲ ಪಡೆದಿದ್ದರು. ಈಚೆಗೆ ಸಾಲದ ಹಣ ಹಿಂತಿರುಗಿಸಿದ್ದರು. ಅಡವಿಟ್ಟ ಬೈಕ್‌ ಮರಳಿ ಕೊಡುವಂತೆ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ರಾಜೇಶ್‌ ಶೆಟ್ಟಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ವಿಡಿಯೋ, ಮಹಿಳೆಗೆ ಬೆದರಿಕೆ

FATAFAT-NEWS-3SHIMOGA : ಕಾರು ಚಾಲಕನೊಬ್ಬ ಗೃಹಿಣಿಯೊಬ್ಬಳನ್ನು ಪರಿಚಿಸಿಕೊಂಡು ಸಲುಗೆ ಬೆಳೆಸಿ ವಿಡಿಯೋ ಕಾಲ್‌ ರೆಕಾರ್ಡ್‌ ಮಾಡಿಕೊಂಡಿದ್ದ. ವಿಡಿಯೋ ಇಟ್ಟುಕೊಂಡು 20 ಸಾವಿರ ರೂ. ಹಣ ನೀಡಬೇಕು ಮತ್ತು ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸಿದ್ದ ಎಂದು ಆರೋಪಿಸಲಾಗಿದೆ. ಇದಕ್ಕೆ ಒಪ್ಪದೆ ಇದ್ದಾಗ ಮಹಿಳೆಯ ಪತಿಗೆ ವಾಟ್ಸಪ್‌ ಮೂಲಕ ವಿಡಿಯೋ ಕಳುಹಿಸಿದ್ದ. ಅಲ್ಲದೆ ಪರಿಚಯಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಮುರುಘ ಮಠ ಸರ್ಕಲ್‌ನಲ್ಲಿ ರಸ್ತೆ ಬದಿ ನಿಂತಿದ್ದ ಆಟೋಗೆ KSRTC ಬಸ್‌ ಡಿಕ್ಕಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment