ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 JANUARY 2023
SHIMOGA : ನಗರದ ಉಷಾ ನರ್ಸಿಂಗ್ ಹೋಂ ಸರ್ಕಲ್ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಿರುವ ಗೋಪುರ ಗಡಿಯಾರ ದಿಕ್ಕಿಗೊಂದು ಸಮಯ ತೋರಿಸುತ್ತಿದೆ. ನಿರ್ವಹಣೆ ಕೊರತೆಯಿಂದ ಗೋಪುರದ ಗಡಿಯಾರಗಳಲ್ಲಿ ಸಮಯದಲ್ಲಿ ವ್ಯತ್ಯಾಸವಾಗಿದೆ.
ಉಷಾ ನರ್ಸಿಂಗ್ ಹೋಂನಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ನಾಲ್ಕು ದಿಕ್ಕಿಗು ಸಮಯ ತೋರಿಸಲು ಗಡಿಯಾರದ ಗೋಪುರ ಮತ್ತು ಸಣ್ಣ ಪಾರ್ಕ್ ನಿರ್ಮಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ಈ ಗಡಿಯಾರದಲ್ಲಿ ಒಂದೊಂದು ದಿಕ್ಕಿನಲ್ಲಿ ಒಂದೊಂದು ಸಮಯ ತೋರಿಸುತ್ತಿದೆ.
ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿರುವ ಗಡಿಯಾರಗಳು ಒಂದೊಂದು ಸಮಯ ತೋರಿಸುತ್ತಿವೆ. ಇನ್ನು, ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿರುವ ಗಡಿಯಾರಗಳು ಸರಿಯಾದ ಸಮಯವನ್ನು ತೋರಿಸುತ್ತಿವೆ. ರಾತ್ರಿ ವೇಳೆ ಗಡಿಯಾರದಲ್ಲಿ ಸಮಯ ಕಾಣಲಿ ಎಂದು ಒಳಭಾಗದಲ್ಲಿ ಲೈಟ್ ಹಾಕಲಾಗುತ್ತಿತ್ತು. ಈಗ ಗಡಿಯಾರದ ಒಳಗಿರುವ ಲೈಟ್ ಕೂಡ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422