ಶಿವಮೊಗ್ಗಕ್ಕೆ ನಟ ಚಿಕ್ಕಣ್ಣ, ಉಪಾಧ್ಯಕ್ಷ ಟೀಮ್‌, ಸೆಲ್ಫಿ, ಫೋಟೊಗೆ ಮುಗಿಬಿದ್ದ ಫ್ಯಾನ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 JANUARY 2024

SHIMOGA : ಉಪಾಧ್ಯಕ್ಷ ಸಿನಿಮಾದ ಪ್ರಚಾರಕ್ಕಾಗಿ ನಟ ಚಿಕ್ಕಣ್ಣ ಮತ್ತು ಸಿನಿಮಾ ತಂಡ ಇವತ್ತು ಶಿವಮೊಗ್ಗಕ್ಕೆ ಆಗಮಿಸಿತ್ತು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಟ ಚಿಕ್ಕಣ್ಣ, ಉಪಾಧ್ಯಕ್ಷ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದರು. ಇದೇ ವೇಳೆ ನಟ ಚಿಕ್ಕಣ್ಣ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ನಟ ಚಿಕ್ಕಣ್ಣ ಅವರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರು ಅವರೊಳಗೆ ಮುಗ್ಧತೆ ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿರುವ ಉಪಾಧ್ಯಕ್ಷ ಸಿನಿಮಾ ಜ.26ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ನಟ ಶರಣ್‌ ಅವರ ಅಭಿನಯದ ಅಧ್ಯಕ್ಷ ಸಿನಿಮಾ ಯಶಸ್ವಿಯಾಗಿತ್ತು. ಅದರ ಮುಂದುವರೆದ ಭಾಗವಾಗಿ ಉಪಾಧ್ಯಕ್ಷ ಬಿಡುಗಡೆಯಾಗುತ್ತಿದೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಸ್ಮಿತಾ ಉಮಾಪತಿ ಅವರು ಇದರ ನಿರ್ಮಾಪಕರಾಗಿದ್ದಾರೆ.ಅನಿಲ್‌ ಕುಮಾರ್‌, ನಿರ್ದೇಶಕ

Updayaksha Movie Actor Chikkanna

ಈವರೆಗೂ ನೂರಾರು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಹಲವು ನಟರೊಂದಿಗೆ ನಟಿಸಿದ್ದೇನೆ. ಈಗ ಉಪಾಧ್ಯಕ್ಷ ಸಿನಿಮಾ ಮೂಲಕ ನಟನಾಗಿದ್ದೇನೆ. ಇದು ಹಳ್ಳಿ ಸೊಗಡಿನ ಸಿನಿಮಾ. ವೀಕ್ಷಕರನ್ನು ರಂಜಿಸಲಿದೆ.ಚಿಕ್ಕಣ್ಣ, ನಾಯಕ

Updayaksha Movie Actor Chikkanna, Actress Malaika

ಕಿರುತೆರೆಯಲ್ಲಿ ಅಭಿನಯಿಸಿದ ಅನುಭವವಿದೆ. ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕ ನಟಿಯಾಗಿದ್ದೇನೆ. ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿದ್ದೇನೆ.ಮಲೈಕ, ನಾಯಕಿ

ಹಾಸ್ಯದ ಮೂಲಕವೆ ಕನ್ನಡಿಗರ ಮನ ಗೆದ್ದಿರುವ ನಟ ಚಿಕ್ಕಣ್ಣ. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಮೂಲಕ ಚಿಕ್ಕಣ್ಣ ನಾಯಕನಾಗಿ ಯಶಸ್ವಿಯಾಗಲಿದ್ದಾರೆ.ಧರ್ಮಣ್ಣ, ನಟ

Updayaksha Movie Actor Chikkanna

ಸೆಲ್ಫಿ, ಫೋಟೊಗೆ ಮುಗಿಬಿದ್ದರು

ಇನ್ನು, ನಟ ಚಿಕ್ಕಣ್ಣ ಅವರ ಸುದ್ದಿಗೋಷ್ಠಿಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶಿವಮೊಗ್ಗ ಪತ್ರಿಕಾ ಭವನಕ್ಕೆ ಆಗಮಿಸಿದ್ದರು. ನಟ ಚಿಕ್ಕಣ್ಣ, ನಟಿ ಮಲೈಕ ಅವರೊಂದಿಗೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡರು. ಶಾಲು ಹೊದಿಸಿ, ಹಾರ ಹಾಕಿ ನಟ ಚಿಕ್ಕಣ್ಣಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ – SHIMOGA CITY – ಇವತ್ತಿನ ಟಾಪ್‌ 10 ಸುದ್ದಿಗಳು | 18 ಜನವರಿ 2024

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment