ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 JANUARY 2024
SHIMOGA : ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಹಿನ್ನೆಲೆ ಮಾರಿಕಾಂಬೆಯನ್ನು ನಿರ್ಮಿಸುವ ಮರ ಶುಕ್ರವಾರ ಸಂಜೆ ಶಿವಮೊಗ್ಗ ಪುರ ಪ್ರವೇಶಿಸಿತು. ಮರಕ್ಕೆ ವಿಶೇಷ ಅಲಂಕಾರ ಮಾಡಿ, ಭಕ್ತರು ಪೂಜೆ ಸಲ್ಲಿಸಿದರು.
ಮಡಿವಾಳ ಸಮಾಜದವರು ಕಾಡಿನಿಂದ ಮರವನ್ನು ಟ್ರಾಕ್ಟರ್‌ನಲ್ಲಿ ತಂದರು. ಮಂಡ್ಲಿಯಲ್ಲಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಮೆರವಣಿಗೆ ಮೂಲಕ ಗಾಂಧಿ ಬಜಾರ್‌ನಲ್ಲಿರುವ ಮಾರಿಕಾಂಬೆಯ ತವರು ಮನೆ ವಿಶ್ವಕರ್ಮ ಸಮಾಜದವರಿಗೆ ಒಪ್ಪಿಸಲಾಯಿತು.
ಮಾರಿಕಾಂಬೆ ಮೂರ್ತಿ ಕೆತ್ತನೆ ಆರಂಭ
ತವರು ಮನೆ ಗಾಂಧಿ ಬಜಾರ್‌ನಲ್ಲಿ ಶಿಲ್ಪಿಗಳು ಮಾರಿಕಾಂಬೆ ದೇವಿಯ ಮೂರ್ತಿ ಕೆತ್ತನೆ ಮಾಡಲಿದ್ದಾರೆ. ಜಾತ್ರೆಗೆ ಒಂದು ವಾರ ಮುನ್ನ ಮೂರ್ತಿಗೆ ಪೂಜೆ ಸಲ್ಲಿಸಿ ಸಾರು ಹಾಕುವ ಶಾಸ್ತ್ರ ನಡೆಸಲಾಗುತ್ತದೆ. ನಗರದಾದ್ಯಂತ ಜಾತ್ರೆಗೆಯ ಮಾಹಿತಿ ಸಾರಲಾಗುತ್ತದೆ.
ಇದನ್ನೂ ಓದಿ – ಸಿಗಂದೂರು ಜಾತ್ರೆಗೆ ಅದ್ಧೂರಿ ಚಾಲನೆ, ಹೇಗಿತ್ತು ವೈಭವ? ಯಾರೆಲ್ಲ ಭಾಗವಹಿಸಿದ್ದರು?
ಮಾರ್ಚ್‌ನಲ್ಲಿ ನಡೆಯಲಿದೆ ಜಾತ್ರೆ
ಈ ಬಾರಿ ಮಾರಿಕಾಂಬೆ ದೇವಿ ಜಾತ್ರೆಯು ಮಾರ್ಚ್ 12 ರಿಂದ 16ರವರೆಗೆ ನಡೆಯಲಿದೆ. ಮಾ.12ರಂದು ತವರು ಮನೆ ಗಾಂಧಿ ಬಜಾರ್ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮರುದಿನ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿರುವ ಗದ್ದುಗೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಾರ್ಚ್ 16ರಂದು ರಾಜಬೀದಿ ಉತ್ಸವದ ಮೂಲಕ ದೇವಿಯನ್ನು ಕಾಡಿಗೆ ಬಿಟ್ಟು ಬರಲಾಗುತ್ತದೆ.
ಇದನ್ನೂ ಓದಿ – ಜಾತ್ರೆಯಲ್ಲಿ ರಥ ಎಳೆದು, ಅಂಗಡಿಗಳಿಗೆ ಭೇಟಿ ನೀಡಿದ ಮಿನಿಸ್ಟರ್, ಕಲಾವಿದರ ನೋವು ಆಲಿಸಿ ಸ್ಥಳದಲ್ಲೇ ನೆರವು
ಮರ ತರುವ ಶಾಸ್ತ್ರದ ಸಂದರ್ಭ ದೇಗುಲ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಸುನಿಲ್, ಪ್ರಭಾಕರ್, ಉಮಾಪತಿ ಸೇರಿದಂತೆ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422