ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAILWAY NEWS : ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣದ ಸ್ಕೀಮ್ ಅಡಿಯಲ್ಲಿ ಪ್ಲಾಟ್‌ಫಾರಂ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಕೆಲವು ರೈಲುಗಳ ಮಾರ್ಗ ಬದಲಾವಣೆಯನ್ನು ಮತ್ತಷ್ಟು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 16545 ಯಶವಂತಪುರ ಕಾರಟಗಿ ಎಕ್ಸ್‌ಪ್ರೆಸ್ ರೈಲು 2024ರ ಜುಲೈ 31ರವರೆಗೆ ಓಬಳಪುರಂ, ಬಳ್ಳಾರಿ ಬೈಪಾಸ್, ಬಳ್ಳಾರಿ ಕಂಟೋನ್ಮೆಟ್, ಕುಡತಿನಿ ಮೂಲಕ ಸಂಚರಿಸಲಿದೆ. ಬಳ್ಳಾರಿ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ. ಬಳ್ಳಾರಿ ಕಂಟೋನ್ಮೆಂಟ್‌ನಲ್ಲಿ 5 ನಿಮಿಷ ನಿಲುಗಡೆ ನೀಡಲಾಗುತ್ತದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರೈಲು ಸಂಖ್ಯೆ 16546 ಕಾರಟಗಿ ಯಶವಂತಪುರ ಎಕ್ಸ್‌ಪ್ರೆಸ್ ರೈಲು. ಕುಡತಿನಿ, ಬಳ್ಳಾರಿ ಕಂಟೋನ್ಮೆಟ್, ಬಳ್ಳಾರಿ ಬೈಪಾಸ್, ಓಬಳಪುರಂ ಮಾರ್ಗದಲ್ಲಿ ಸಂಚರಿಸಲಿದೆ. ಬಳ್ಳಾರಿ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ. ಬಳ್ಳಾರಿ ಕಂಟೋನ್ಮೆಂಟ್‌ನಲ್ಲಿ 5 ನಿಮಿಷ ನಿಲುಗಡೆ ನೀಡಲಾಗುತ್ತದೆ.
ರೈಲು ಸಂಖ್ಯೆ 16217 ಮೈಸೂರು – ಸಾಯಿ ನಗರ ಶಿರಡಿ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16218 ಸಾಯಿ ನಗರ – ಮೈಸೂರು ಶಿರಡಿ ಎಕ್ಸ್‌ಪ್ರೆಸ್ ರೈಲು ಮೇಲಿನ ಮಾರ್ಗದಲ್ಲಿಯೇ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ TO ಮೈಸೂರು 4 ರೈಲುಗಳಿವೆ, ಯಾವ್ಯಾವ ಟೈಮ್‌ಗೆ ಎಲ್ಲಿಂದ ಹೊರಡುತ್ತವೆ? ಎಷ್ಟೊತ್ತಿಗೆ ತಲುಪುತ್ತವೆ?