ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 12 FEBRUARY 2024
SHIMOGA : ಗಾಂಧಿ ಬಜಾರ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವಿದ್ದ ಪರ್ಸ್ ಕಳ್ಳತನವಾಗಿದೆ. 37,500 ರೂ. ಬೆಲೆಯ 6.780 ಗ್ರಾಂ ತೂಕದ ಚಿನ್ನದ ಹ್ಯಾಂಗಿಗ್ಸ್ ಮತ್ತು ಕಿವಿ ಮಾಟಿ ಕಳುವಾಗಿದೆ.
ಆಗಷ್ಟೆ ಖರೀದಿ ಮಾಡಿದ್ದ ಚಿನ್ನಾಭರಣ
ಹಾರನಹಳ್ಳಿಯ ಸವಿತಾ ಎಂಬುವವರು ತಮ್ಮ ಸಹೋದರಿಯ ಜೊತೆಗೆ ಗಾಂಧಿ ಬಜಾರ್ ಮುಖ್ಯರಸ್ತೆಯ ಚಿನ್ನಾಭರಣ ಅಂಗಡಿಯಲ್ಲಿ ಹ್ಯಾಂಗಿಂಗ್ಸ್ ಮತ್ತು ಕಿವಿ ಮಾಟಿ ಖರೀದಿಸಿದ್ದರು. ಬಳಿಕ ಗಾಂಧಿ ಬಜಾರ್‌ನಲ್ಲಿ ಕಬ್ಬಿನ ಹಾಲಿನ ಜ್ಯೂಸ್ ಸೆಂಟರ್‌ನಲ್ಲಿ ಜ್ಯೂಸ್ ಕುಡಿಯಲು ತೆರಳಿದ್ದರು.
ದುಡ್ಡು ಕೊಡಲು ಬ್ಯಾಗ್‌ಗೆ ಕೈ ಹಾಕಿದಾಗ ಶಾಕ್
ಕಬ್ಬಿನ ಹಾಲಿನ ಅಂಗಡಿಯವರಿಗೆ ದುಡ್ಡು ಕೊಡಲು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಪರ್ಸ್ ತೆಗೆಯಲು ನೋಡಿದಾರು. ಆಗ ಬ್ಯಾಗ್‌ನ ಜಿಪ್ ಸ್ವಲ್ಪ ತೆಗೆದಿರುವಂತೆ ಇತ್ತು. ಒಳಗಿದ್ದ ಪರ್ಸ್ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಆದೇ ಪರ್ಸ್‌ನಲ್ಲಿ ಆಗಷ್ಟೆ ಖರೀದಿಸಿದ್ದ ಹ್ಯಾಂಗಿಂಗ್ಸ್ ಮತು ಕಿವಿ ಮಾಟಿ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – KSRTC ಪ್ರಯಾಣಿಕರೆ ಹುಷಾರ್, ನಿಲ್ದಾಣದಲ್ಲಿ ಮತ್ತೆ ಟಾರ್ಗೆಟ್ ಆಯ್ತು ವ್ಯಾನಿಟಿ ಬ್ಯಾಗ್, ಬಸ್ ಹತ್ತಿದ್ದ ಶಿಕ್ಷಕಿಗೆ ಬಿಗ್ ಶಾಕ್
LATEST NEWS
- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

- ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು
















