ದುರ್ಗಿಗುಡಿ ದುರ್ಗಮ್ಮ ಜಾತ್ರೆ ವೇಳೆ ದೇಗುಲದ ಬಾಗಿಲ ಬಳಿ ಬಂದು ನಿಂತಿದ್ದ ಮಹಿಳೆಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 MARCH 2024

SHIMOGA : ದುರ್ಗಿಗುಡಿ ದುರ್ಗಮ್ಮ ಜಾತ್ರೆ ವೇಳೆ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾಗಿದೆ. ದೇಗುಲದ ಮುಂದೆ ನಿಂತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಾಪೂಜಿನಗರ ನಿವಾಸಿ ಯಶೋಧ ಅವರು ತನ್ನ ತಂಗಿ ಮತ್ತು ಅಕ್ಕನ ಮಗಳ ಜೊತೆಗೆ ದುರ್ಗಿಗುಡಿಯ ದುರ್ಗಮ್ಮ ಜಾತ್ರೆಗೆ ಆಗಮಿಸಿದ್ದರು. ದೇವರ ದರ್ಶನಕ್ಕೆಂದು ದೇಗುಲದ ಮುಂದೆ ನಿಂತಿದ್ದಾಗ ಯಶೋಧ ಅವರ ಭುಜದ ಮೇಲೆ ಲಕ್ಷ್ಮಿ ಪೆಂಡೆಂಟ್‌ ಸಿಕ್ಕಿಬಿದ್ದಿತ್ತು. ಇದನ್ನು ಗಮನಿಸಿದ ತಂಗಿ ಯಶೋಧ ಅವರಿಗೆ ತಿಳಿಸಿದ್ದರು. ಪರಿಶೀಲಿಸಿದಾಗ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು.

ಜಾತ್ರೆಗೆ ತೆರಳಿದ್ದ ಸಂದರ್ಭ 38 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಇದರ ಮೌಲ್ಯ ಅಂದಾಜು 1.50 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಈಶ್ವರಪ್ಪ ಬೈಕ್‌ ರ‍್ಯಾಲಿ ವಿರುದ್ದ ಪ್ರಕರಣ ದಾಖಲು, ಎರಡು ಕಾರಣ ನೀಡಿದ ಚುನಾವಣಾಧಿಕಾರಿಗಳು, ಏನದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment