‘ಹಸೆ ಚಿತ್ತಾರ’ ಪುಸ್ತಕ ಬಿಡುಗಡೆ, ಯಾರೆಲ್ಲ ಭಾಗವಹಿಸಿದ್ದರು, ಏನೇನೆಲ್ಲ ಮಾತನಾಡಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 31 MARCH 2024

SHIMOGA : ಸಾಹಿತಿ ಡಾ. ಮೋಹನ ಚಂದ್ರಗುತ್ತಿ ಅವರ ‘ಹಸೆ ಚಿತ್ತಾರ’ ಹಾಗೂ ‘ಹೆಚ್ಚೆಯ ಶಿವಪ್ಪ ಮಾಸ್ತಾರ್ ಅವರ ಡೊಳ್ಳಿನ ಪದಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು. ಸಹ್ಯಾದ್ರಿ ಕಲಾ ಕಾಲೇಜು, ಗೀತಾಂಜಲಿ ಪ್ರಕಾಶನ, ಶಿಕಾರಿಪುರ ಸುವ್ವಿ ಪ್ರಕಾಶನ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯಾರೆಲ್ಲ ಏನೇನು ಹೇಳಿದರು?

ಮನುಷ್ಯ, ಸಂಬಂಧಗಳನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದಾನೆ. ಇಂತಹ ಸಂದರ್ಭ ವೇದನೆ ಹಾಗೂ ಸಂವೇದನೆಗಳನ್ನು ದಾಖಲಿಸಿಡಲು ಹೊರಟಿರುವುದು ದೊಡ್ಡ ಸಾಧನೆ‌. ಶಿವಪ್ಪ ಮಾಸ್ತಾರ್ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಅರ್ಹರು. ಆದರೆ, ಅಂದಿನ ಕಾಲಘಟ್ಟದಲ್ಲಿ ಸಮರ್ಪಕ ವೇದಿಕೆ ಸಿಗಲಿಲ್ಲ.ಜಿ.ಪ್ರಶಾಂತ ನಾಯಕ, ಪ್ರಾಧ್ಯಾಪಕ, ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗ

Hase Chittara book. Dr Mohan Chandragutti

ಮೋಹನ್ ಚಂದ್ರಗುತ್ತಿ ಅವರು ದಾಖಲಿಸಿರುವ ಡೊಳ್ಳಿನ ಪದಗಳು ಶಿವಪ್ಪ ಮಾಸ್ತಾರರ ಸ್ವಂತ ರಚನೆ. ಡೊಳ್ಳು ಹಾಲುಮತ ಸಮುದಾಯದ ಆರಾಧ್ಯ ದೈವ. ಇದನ್ನು ಮಲೆನಾಡಿನ ದೀವರು ಅತ್ಯಂತ ಪ್ರೀತಿಯಿಂದ ಗೌರವಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ. ಜನಪದ ಕಲೆ, ಸಂಸ್ಕೃತಿ ಶ್ರಮ ಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ದುಡಿಯುವ ವರ್ಗಗಳಲ್ಲಿ ಮಾತ್ರ ಅದ್ಬುತವಾದ ಜನಪದ ಸಂಪತ್ತು, ಸಿರಿವಂತಿಕೆ ಇರುತ್ತದೆ.ಡಾ.ಜಿ.ಸಣ್ಣಹನುಮಪ್ಪ, ಜನಪದ ತಜ್ಞ

Hase Chittara book. Dr Mohan Chandragutti

ನನ್ನ ಅವ್ವ (ರೇಣುಕಮ್ಮ ಶಿವಪ್ಪ ಮಾಸ್ತಾರ್) ಕೂಡ ದೊಡ್ಡ ಕಲಾವಿದೆ. ಆಕೆಯೇ, ನನಗೆ ಬರೆಯಲು ಶಕ್ತಿ ತುಂಬಿದವಳು. ಗರ್ಭಿಣಿ ಆಗಿದ್ದಾಗಲೇ ಕಾದಂಬರಿಗಳನ್ನು ಓದುತ್ತ, ನನಗೆ ಸಾಹಿತ್ಯದ ಅರಿವು ಮೂಡಿಸಿದಳು. ನಾನು ಜನಿಸಿದಾಗ ನನ್ನ ಮನೆಯಲ್ಲಿ ಹಿಡಿಯಷ್ಟು ಅನ್ನ ಇರಲಿಲ್ಲ. ಇದು ನನಗೆ ಕೊರತೆಯಾಗಿ ಕಾಣ ಕೂಡದು ಎಂದು ಅಕ್ಷರ ಕಲಿಸಿ, ಸ್ವಾಭಿಮಾನದ ನೆಲೆಯನ್ನು ರೂಪಿಸಿ ಸುಂದರ ಬದುಕನ್ನು ಕಲ್ಪಿಸಿಕೊಟ್ಟಳು. ಅನೇಕ ಸವಾಲುಗಳ ಮಧ್ಯೆ  ‘ಹಸೆ ಚಿತ್ತಾರ’ ಪುಸ್ತಕ ಬಿಡುಗಡೆಗೊಳಿಸಿದ್ದೇನೆ.ಮೋಹನ ಚಂದ್ರಗುತ್ತಿ, ಸಾಹಿತಿ

Hase Chittara book. Dr Mohan Chandragutti

ಸಾಹಿತಿ ಮೋಹನ್ ಚಂದ್ರಗುತ್ತಿ ಅವರ ತಾಯಿ ರೇಣುಕಮ್ಮ ಶಿವಪ್ಪ ಮಾಸ್ತಾರ್, ಸುಮಿತ್ರಾ ಮೋಹನ್ ಚಂದ್ರಗುತ್ತಿ, ಗೀತಾಂಜಲಿ ಪ್ರಕಾಶನದ ಜಿ.ಬಿ.ಟಿ.ಮೋಹನ್, ಸುವ್ವಿ ಪ್ರಕಾಶನದ ಬಿ.ಎನ್.ಸುನಿಲ್ ಕುಮಾರ್, ಅಣ್ಣಪ್ಪ ಮಳೀಮಠ, ಟಿ.ಶೃಂಗಶ್ರೀ ಇದ್ದರು.

 ಇದನ್ನೂ ಓದಿ ಸಿನಿಮಾ ನಟ, ರಂಗಭೂಮಿ ಕಲಾವಿದ ಯೇಸು ಪ್ರಕಾಶ್‌ ಇನ್ನಿಲ್ಲ, ಸಾಗರದಲ್ಲಿ ಅಂತಿಮ ದರ್ಶನ, ರಂಗ ನಮನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 31, 2024

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

Leave a Comment