SHIVAMOGGA LIVE NEWS | 1 APRIL 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SORABA : ತಾಲ್ಲೂಕಿನ ಶಾಂತಪುರ ಸಂಸ್ಥಾನ ಮಠದಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಜನಜಾಗೃತಿ ಧರ್ಮ ಸಮಾರಂಭ ಹಾಗೂ 22ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ರಂಭಾಪುರಿ ಮಠದ ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಶ್ರೀಗಳು ಪ್ರಮುಖ ವಿಚಾರಗಳನ್ನು ತಿಳಿಸಿದರು.
ಆಂತರಿಕ ಬದುಕು ಪರಿಶುದ್ಧವಾಗಬೇಕು
ಮನುಷ್ಯನ ಬದುಕು ಸಮೃದ್ಧಗೊಂಡಂತೆ ಮಾನಸಿಕ ನೆಮ್ಮದಿಗಾಗಿ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು. ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಮನುಷ್ಯನಿಗೆ ಮಾನಸಿಕ ಶಾಂತಿ, ಸಂತೃಪ್ತಿ ಇಲ್ಲದಂತಾಗಿದೆ. ನೆಮ್ಮದಿ ನೆಲೆಗೊಳ್ಳಬೇಕಾದರೆ ಆಂತರಿಕ ಬದುಕು ಪರಿಶುದ್ಧವಾಗಬೇಕು.
ಬದುಕಿಗೆ ಸಂಸ್ಕಾರ ಮುಖ್ಯ. ಸಂಪ್ರದಾಯಗಳು ಬದಲಾಗಬಹುದು ಅದರೆ, ನೈತಿಕತೆ ಶಾಶ್ವತವಾಗಿರುತ್ತದೆ. ಅಂಗ ಅವಗುಣ ದೂರವಾಗಿ ಲಿಂಗ ಗುಣ ಬೆಳೆಸಲು ವೀರಶೈವ ಧರ್ಮ ಸದಾ ಶ್ರಮಿಸಿದೆ. ಭಕ್ತರ ಸಹಕಾರದಿಂದ ಪ್ರತಿವರ್ಷ ಜಯಂತ್ಯುತ್ಸವ ಆಚರಿಸುತ್ತಿರುವುದು ಸಂತೋಷ ತಂದಿದೆ.
ಪರಂಪರೆ, ನಂಬಿಕೆ, ಪ್ರೀತಿ ವಿಶ್ವಾಸವು ನಮ್ಮ ದೇಶದ ಶ್ರಿಮಂತಿಕೆಯ ಪ್ರತೀಕವಾಗಿವೆ. ಭಕ್ತರು ತಾವು ಬೆಳೆದ ಬೆಳೆಗಳನ್ನು, ಸಂಪತ್ತನ್ನು ಸತ್ಕಾರ್ಯಗಳಿಗೆ ದಾನ ಮಾಡುವುದರಿಂದ ಪುಣ್ಯದ ಫಲ ಲಭಿಸುವುದುಮಹಾಂತ ಸ್ವಾಮೀಜಿ, ಜಡೆ ಸಂಸ್ಥಾನ ಮಠ
ಮನುಷ್ಯ ತನ್ನ ನೆಲೆಯನ್ನು ಕಂಡುಕೊಳ್ಳಲು ಧರ್ಮದ ಆಚರಣೆಗಳು ಬೇಕು. ಇಲ್ಲದಿದ್ದರೆ ನಮ್ಮ ಭಾವನೆಗಳು ಅಧೋಗತಿಗೆ ತಲುಪುತ್ತವೆ. ಧರ್ಮದ ದಾರಿಯಲ್ಲಿ ನಡೆಯಲು ಸಂಸ್ಕಾರ ಬೇಕು. ಮೋಕ್ಷದ ದಾರಿಗೆ ಗುರುವಿನ ಕೃಪೆ ಬೇಕು.ಸುಜ್ಞಾನ ಶಿವಾಚಾರ್ಯ ಸ್ವಾಮೀಜಿ, ಶಿರಹಟ್ಟಿ
ನಿವೃತ್ತ ಪ್ರಾಂಶುಪಾಲ ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್ ಕುಬಟೂರು ಕಾರ್ಯಕ್ರಮ ಉದ್ಘಾಟಿಸಿದರು. ಶಾಂತಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ದಾನಯ್ಯ ದೇವರು, ಋಷಭಸೇನ ಭಟ್ಟಾರಕ ಸ್ವಾಮೀಜಿ, ಸದಾನಂದಗೌಡ ಬಿಳಿಗಲಿ, ಬಂಗಾರಪ್ಪಗೌಡ, ವಿಜೇಂದ್ರ ಕುಮಾರ್ ತಲಗುಂದ, ಗುರುಪ್ರಸನ್ನ ಗೌಡ ಇದ್ದರು.
ಇದನ್ನೂ ಓದಿ – ‘ಹಸೆ ಚಿತ್ತಾರ’ ಪುಸ್ತಕ ಬಿಡುಗಡೆ, ಯಾರೆಲ್ಲ ಭಾಗವಹಿಸಿದ್ದರು, ಏನೇನೆಲ್ಲ ಮಾತನಾಡಿದರು?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






