ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 APRIL 2024
ELECTION NEWS : ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಸಾರ್ವಜನಿಕ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅನುಮಾನ ಮತ್ತು ಅಗತ್ಯ ಬಿದ್ದರೆ ಸರ್ಕಾರಿ ವಾಹನಗಳು, ಪೊಲೀಸ್ ವಾಹನ ಮತ್ತು ಆಂಬುಲೆನ್ಸ್‌ಗಳನ್ನು ತಾಪಾಸಣೆ ಮಾಡಬಹುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಗುರುದತ್ತ ಹೆಗಡೆ ಅವರು ಈ ವಿಚಾರ ತಿಳಿಸಿದರು.
ಸಂವಾದದಲ್ಲಿ ಡಿಸಿ ಹೇಳಿದ 3 ಪ್ರಮುಖಾಂಶ
ಚುನಾವಣೆ ಅಕ್ರಮದ ಕುರಿತು ಅನುಮಾನ ಬಂದರೆ ಸರ್ಕಾರಿ ವಾಹನ, ಪೊಲೀಸ್ ವಾಹನ, ಆಂಬುಲೆನ್ಸ್‌ಗಳನ್ನು ಕೂಡ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು, ಗಡಿಪಾರು ಕುರಿತು ಇಬ್ಬರು ಉಪ ವಿಭಾಗಾಧಿಕಾರಿಗಳು 15 ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ. ಕೂಲಂಕಷ ಪರಿಶೀಲನೆ ಬಳಿಕ ಇನ್ನೊಂದು ವಾರದಲ್ಲಿ ಎಷ್ಟು ಮಂದಿಯನ್ನು ಗಡಿಪಾರು ಮಾಡಲಾಗುತ್ತದೆ ಎಂಬ ಆದೇಶ ಪ್ರಕಟಿಸಲಾಗುತ್ತದೆ.

ಹೊಸನಗರ, ತೀರ್ಥಹಳ್ಳಿಯಲ್ಲಿ ಆರು ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರ ಧ್ವನಿ ಕೇಳಿಸಿತ್ತು. ನಾಲ್ಕು ಕಡೆ ಅಧಿಕಾರಿಗಳು ಭೇಟಿ ನೀಡಿ ಜನರ ಮನವೊಲಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನೀರಿನ ಯೋಜನೆ ವಿರೋಧಿಸಿ ಮತ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ. ಹೊಸನಗರದಲ್ಲಿ ರಸ್ತೆಗಾಗಿ ಮತ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ. ಅಲ್ಲಿಯು ಮನವೊಲಿಸುವ ಪ್ರಯತ್ನವಾಗುತ್ತಿದೆ.

ಅಭ್ಯರ್ಥಿ, ರಾಜಕಾರಣಿಗಳು ವೈಯಕ್ತಿಕ ಕಮೆಂಟ್, ಟೀಕೆ ಮಾಡುವುದು ಸರಿಯಲ್ಲ. ಈ ಸಂಬಂಧ ಪ್ರಕರಣಗಳು ದಾಖಲಾಗುತ್ತಿವೆ. ವಾಟ್ಸಪ್‌ನಲ್ಲಿ ಹಳೇ ವಿಡಿಯೋಗಳು ಹರಿದಾಡುತ್ತಿರುವ ಆರೋಪ ಇದೆ. ಈ ಬಗ್ಗೆ ಆಯೋಗ ಗಮನ ಹರಿಸುತ್ತದೆ. ಜನರು ಕೂಡ ಎಚ್ಚರ ವಹಿಸಬೇಕಿದೆ.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.
ಇದನ್ನೂ ಓದಿ – ಪಿಯುಸಿ ಫಲಿತಾಂಶ, ಶಿವಮೊಗ್ಗದ ಮೂವರಿಗೆ ರ‍್ಯಾಂಕ್, ಯಾರೆಲ್ಲ ರ‍್ಯಾಂಕ್ ಪಡೆದಿದ್ದಾರೆ? ಎಷ್ಟು ಅಂಕ ಗಳಿಸಿದ್ದಾರೆ?
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






