ಹೊಳೆಹೊನ್ನೂರು ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ತೀರ್ಥಹಳ್ಳಿ ಯುವಕ ಸೇರಿ ಇಬ್ಬರು ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 19 APRIL 2024

HOLEHONNURU : ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರು ಸ್ಥಳದಲ್ಲೆ ಸಾವನಪ್ಪಿದ್ದಾರೆ. ತೀರ್ಥಹಳ್ಳಿಯ ಹೆಚ್.ಆರ್ ಧನುಷ್ (24) ಮತ್ತು ಆತನ ಸ್ನೇಹಿತ ಮೃತಪಟ್ಟಿದ್ದಾರೆ. ಆತನ ಹೆಸರು ತಿಳಿದುಬಂದಿಲ್ಲ. ಆಗರದಹಳ್ಳಿ ಕ್ರಾಸ್‍ನಲ್ಲಿ ಗುರುವಾರ ಘಟನೆ ಸಂಭವಿಸಿದೆ. ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಅಪಘಾತ ಸಂಭವಿಸಿದೆ. ಮುಂಬದಿ ತೆರಳುತ್ತಿದ್ದ ಬೈಕ್‌ ಏಕಾಏಕಿ ತಿರುವು ಪಡೆದಿದ್ದರಿಂದ ಹಿಂಬದಿಯ ಬೈಕ್‌ ಸವಾರರು ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಗಾಳಿ, ಮಳೆ, ತೀರ್ಥಹಳ್ಳಿಯಲ್ಲಿ ವ್ಯಕ್ತಿ ಸಾವು, ಆನಂದಪುರ, ಆಗುಂಬೆ ಸೇರಿ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment