ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 22 APRIL 2024
SHIMOGA : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭಾನುವಾರ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಕರನ್ನು ಭೇಟಿ ಮಾಡಿ ತಮ್ಮ ಸಾಧನೆಯ ಪ್ರತಿ ನೀಡಿ ಮತಯಾಚಿಸಿದರು.
‘ಕೇಂದ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ಗುರಿ ಹೊಂದಿದ್ದೇನೆ. ಇದು ಕೇವಲ ಟ್ರೈಲರ್ ಮಾತ್ರ ಇನ್ನೂ ಪಿಕ್ಚರ್ ಬಾಕಿ ಇದೆ. ಅದನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಪೂರೈಸುತ್ತೇನೆ. ನಾನು ಸಂಸದನಾಗುವ ಮೊದಲು ಕೇವಲ ಬೆರಳೆಣಿಕೆಯಷ್ಟು ರೈಲುಗಳು ಶಿವಮೊಗ್ಗ ನಗರಕ್ಕೆ ಬರುತ್ತಿದ್ದವು. ಈಗ ಮಹಾನಗರಗಳೂ ಸೇರಿದಂತೆ ಹಲವು ನಗರ ಹಾಗೂ ಜಿಲ್ಲೆಗಳಿಗೆ ಶಿವಮೊಗ್ಗದಿಂದ ರೈಲ್ವೇ ಸಂಪರ್ಕ ಕಲ್ಪಿಸಲಾಗಿದೆ. ಇದು ರೈಲ್ವೇ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಮಾಡಿದ ಸಾಧನೆ’ ಎಂದರು.
ನಂತರ ಭದ್ರಾವತಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿರುವ ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮತ ನೀಡುವಂತೆ ಜನರಿಗೆ ಮನವಿ ಮಾಡಿದರು. ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಶಾಂತ್ ಕುಕ್ಕೆ, ಭದ್ರಾವತಿ ಬಿಜೆಪಿ ಮುಖಂಡ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ರಾಹುಲ್ ಬಿದರೆ, ಆನಂದ್ ಉಪಸ್ಥಿತರಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ
LATEST NEWS
- ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

About The Editor
ನಿತಿನ್ ಆರ್.ಕೈದೊಟ್ಲು
















