ಮರು ಮೌಲ್ಯಮಾಪನ, ಪಿಯುಸಿಯಲ್ಲಿ ಶಿವಮೊಗ್ಗದ ಸಿಂಚನಾಗೆ ರಾಜ್ಯಮಟ್ಟದಲ್ಲಿ 4ನೇ ರ‍್ಯಾಂಕ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 APRIL 2024

EDUCATION NEWS : ದ್ವಿತೀಯ ಪಿಯುಸಿ ಮೌರು ಮೌಲ್ಯಮಾಪನದಲ್ಲಿ ಶಿವಮೊಗ್ಗದ ಹೆಚ್.ಸಿ.ಸಿಂಚನಾಗೆ ಎರಡು ಅಂಕಗಳು ಹೆಚ್ಚುವರಿಯಾಗಿ ದೊರೆತಿವೆ. ಹಾಗಾಗಿ ಕಲಾ ವಿಭಾಗದಲ್ಲಿ ಸಿಂಚನಾಗೆ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.

ಪಿಯುಸಿ ಫಲಿತಾಂಶ ಪ್ರಕಟವಾದಾಗ ಸಿಂಚನಾಗೆ 591 ಅಂಕ ಲಿಭಿಸಿತ್ತು. ಇತಿಹಾಸ ಪತ್ರಿಕೆಯ ಮರುಮೌಲ್ಯಪಾನಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲು ಇತಿಹಾಸದಲ್ಲಿ ಸಿಂಚನಾ 78 ಅಂಕ ದೊರೆತಿತ್ತು. ಮರುಮೌಲ್ಯಮಾಪನದ ಬಳಿಕ 80 ಅಂಕ ಪಡೆದಿದ್ದಾರೆ. ಇದರಿಂದ ಒಟ್ಟು ಅಂಕಗಳು 593ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಿಂಚನಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.

ಸಿಂಚನಾ ಶಿವಮೊಗ್ಗದ ಡಿವಿಎಸ್‌ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ. ಶಿಕ್ಷಕಿ ವಾಣಿ.ಆರ್.ಜೆ ಮತ್ತು ಹಾಲೇಶ್‌.ಎನ್‌ ಅವರ ಪುತ್ರಿ. ಯುಪಿಎಸ್‌ಸಿ ಪರೀಕ್ಷೆ ಬರೆದು ನಾಗರಿಕೆ ಸೇವೆಗೆ ಸೇರುವ ಗುರಿ ಹೊಂದಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದ ಮಹಿಳೆಯರೆ ಹುಷಾರ್‌, ನಿಮ್ಮನ್ನೂ ಅಡ್ಡಗಟ್ಟಬಹುದು ಈ ತನಿಖಾಧಿಕಾರಿಗಳು, ಏನಿದು ಕೇಸ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment