ಶಿವಮೊಗ್ಗ ಲೈವ್
SHIVAMOGGA LIVE NEWS | 30 APRIL 2024
BHADRAVATHI : ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭದ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಉಪ ವಿಭಾಗಾಧಿಕಾರಿ ಗೊಂದಲಕ್ಕೆ ತೆರೆ, ವರ್ಗಾವಣೆ ಸಂಬಂಧ ಹೊಸ ಅಧಿಸೂಚನೆ
ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ಮನೆಗೆ ತೆರಳುವಾಗ ದಾಳಿ ನಡೆಸಲಾಗಿದೆ. ಸಮಾರಂಭದಲ್ಲಿ ಯತಿನ್ ಬೋಸ್ಲೆ ಮತ್ತು ಸುಹಾಸ್ ಎಂಬುವವರು ಗುರಾಯಿಸಿದ್ದಾರೆ ಎಂದು ಆರೋಪಿಸಿ ನಾಲ್ವರ ಗುಂಪು, ರಸ್ತೆಯಲ್ಲಿ ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದೆ. ಬಿಯರ್ ಬಾಟಲಿಯಿಂದ ಯತಿನ್ ಬೋಸ್ಲೆಯ ಬೆನ್ನಿಗೆ ಚುಚ್ಚಿ ಗಾಯಗೊಳಿಸಲಾಗಿದೆ. ಘಟನೆ ಸಂಬಂಧ ಮಂಜು ಸೇರಿ ನಾಲ್ವರ ವಿರುದ್ಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಕಸ ಬಿಸಾಡಲು ಮನೆಯಿಂದ ಹೊರ ಬಂದ ಮಹಿಳೆ ಸಾವು, ಹೆದ್ದಾರಿ ಮೇಲಿತ್ತು ಮೃತದೇಹ, ಆಗಿದ್ದೇನು?