ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ELECTION NEWS : ಭಾರಿ ಬಿಸಿಲಿನ ನಡುವೆ ಶಿವಮೊಗ್ಗದಲ್ಲಿ ನಾಳೆ ಮತದಾನ ನಡೆಯುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾನಕ್ಕೆ ಹೇಗೆಲ್ಲ ವ್ಯವಸ್ಥೆ ಮಾಡಲಾಗಿದೆ? ಇಲ್ಲಿದೆ ಪ್ರಮುಖಾಂಶ.
ಮೇ 7ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಆರಂಭಕ್ಕೂ ಮುನ್ನ 2039 ಮತಗಟ್ಟೆಗಳಲ್ಲಿ ಪೋಲಿಂಗ್ ಏಜೆಂಟ್ಗಳು ಸಮ್ಮುಖದಲ್ಲಿ ಕಲ್ಪಿತ ಮತದಾನ ನಡೆಯಲಿದೆ.
ಶಿವಮೊಗ್ಗದಲ್ಲಿ ಈ ಬಾರಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಂದು ನೋಟಾ ಮತವಿರುತ್ತದೆ. ಈ ಹಿನ್ನೆಲೆ ಎರಡು ಮತಯಂತ್ರ ಇರಲಿದೆ. ಒಂದು ಕಂಟ್ರೋಲ್ ಯುನಿಟ್ ಇರುತ್ತದೆ. ಮತ ಹಾಕಿದ ಬಳಿಕ ಮತದಾರರು ವಿವಿ ಪ್ಯಾಟ್ನಲ್ಲಿ ಚಿಹ್ನೆ, ಕ್ರಮ ಸಂಖ್ಯೆ ತೋರಿಸಲಿದೆ.
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮತದಾರರಿಗೆ ಎಡಗೈ ತೋರು ಬೆರಳಿಗೆ ಶಾಯಿ ಹಚ್ಚಲಾಗುತ್ತದೆ.
ಮತಗಟ್ಟೆ ಮತ್ತು ಮತಯಂತ್ರ ರಕ್ಷಣೆ ಮತ್ತು ಶಾಂತಿಯುತ ಮತದಾನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದಕ್ಕಾಗಿ 4 ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ. ಉಳಿದಂತೆ 12 ಡಿವೈಎಸ್ಪಿ, 22 ಇನ್ಸ್ಪೆಕ್ಟರ್, 77 ಪಿಎಸ್ಐ, 133 ಎಎಸ್ಐ, 1645 ಹೆಚ್.ಸಿ ಮತ್ತು ಪಿಸಿ, 1078 ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ.
ಮತದಾನಕ್ಕೆ ಅನುಕೂಲವಾಗಲಿ ಎಂದು ಮತಗಟ್ಟೆಗಳಲ್ಲಿ ಮೂಲ ಸಲಭ್ಯ ಒದಗಿಸಲಾಗುತ್ತಿದೆ. ಕುಡಿಯುವ ನೀರು, ರಾಂಪ್, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರಿ ಬಿಸಿಲು ಇರುವುದರಿಂದ ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಓಆರ್ಎಸ್, ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ. ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.
ಮತಗಟ್ಟೆಗೆ ತೆರಳುವ ಸಿಬ್ಬಂದಿಗೆ ಬಿಸಿಯೂಟ ತಯಾರಕರಿಂದ ಊಟ, ಉಪಹಾರ ಮತ್ತು ಮಜ್ಜಿಗೆ, ಟೀ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳಾ ಮತದಾರರೆ ಹೆಚ್ಚು, ಎಲ್ಲೆಲ್ಲಿ ಎಷ್ಟಿದ್ದಾರೆ ಮತದಾರರು? ಎಷ್ಟು ಮತಗಟ್ಟೆ ಸ್ಥಾಪಿಸಲಾಗಿದೆ?