ಶಿವಮೊಗ್ಗದಲ್ಲಿ ವೋಟ್‌ ಹಾಕಿದರೆ ಸಿಗುತ್ತೆ ಸಿಂಹಾಸನ, ಕಿರೀಟ, ರಾಜ ಪೋಷಾಕಿನಲ್ಲಿ ಕಂಗೊಳಿಸ್ತಿದ್ದಾರೆ ಸಿಬ್ಬಂದಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

ELECTION NEWS : ಇಲ್ಲಿ ಮತದಾರನೆ ಪ್ರಭು. ರಾಜ ಪೋಷಾಕಿನಲ್ಲಿ ಮಿಂಚುತ್ತಿದ್ದಾರೆ ಚುನಾವಣ ಅಧಿಕಾರಿಗಳು. ಇದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ಥಾಪಿಸಲಾಗಿರುವ ವಿಶೇಷ ಮತಗಟ್ಟೆಯ ರಮಣೀಯ ದೃಶ್ಯ.

ಅರಮನೆ ಮಾದರಿಯಲ್ಲಿ ಮತಗಟ್ಟೆಯನ್ನು ಅಲಂಕೃತಗೊಳಿಸಲಾಗಿದೆ. ಚುನಾವಣ ಸಿಬ್ಬಂದಿ ರಾಜ ಪೋಷಾಕಿನಲ್ಲಿ  ಗಮನ ಸೆಳೆಯುತ್ತಿದ್ದಾರೆ. ಇಬ್ಬರು ಪುರುಷ, ಮೂವರು ಮಹಿಳಾ ಸಿಬ್ಬಂದಿ ವಿಭಿನ್ನವಾಗಿ ರೆಡಿಯಾಗಿದ್ದಾರೆ.

ಇನ್ನು, ಮತ ಚಲಾಯಿಸಿ ಹೊರ ಬಂದವರು ಫೋಟೊ ಕ್ಲಿಕ್ಕಿಸಲು ಫೋಟೊ ಜೋನ್‌ ಸ್ಥಾಪಿಸಲಾಗಿದೆ. ಮತದಾರರು ಸಿಂಹಾಸನದ ಮೇಲೆ ಕುಳಿತು ಕಿರೀಟ ಧರಿಸಿ, ಶಾಯಿ ಹಚ್ಚಿಸಿಕೊಂಡ ಬೆರಳು ತೋರಿಸಿ ಫೋಟೊಗೆ ಪೋಸ್‌ ನೀಡಬಹುದು. ಹಿಂಭಾಗದಲ್ಲಿ ರಾಜನ ಅಸ್ಥಾನ ಹೋಲುವ ಚಿತ್ರವಿದೆ. ಅದರ ಮೇಲೆ ಮತದಾರ ಪ್ರಭು ಎಂದು ಬರೆಯಲಾಗಿದೆ. ಬೆಳಗ್ಗೆಯಿಂದ ಇಲ್ಲಿ ಹಲವರು ಮತ ಚಲಾಯಿಸಿ, ಸಿಂಹಾಸನವೇರಿ ಖುಷಿ ಪಟ್ಟಿದ್ದಾರೆ.

different election booth in Shimoga

different election booth in Shimoga

different election booth in Shimoga

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತದಾನ ಆರಂಭ, ಬೆಳಗ್ಗೆಯಿಂದಲೇ ಮತದಾರರಲ್ಲಿ ಉತ್ಸಾಹ, ಅಲ್ಲಲ್ಲಿ ತಾಂತ್ರಿಕ ದೋಷ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment