‘ಡಾ. ಧನಂಜಯ ಸರ್ಜಿ ಗೆಲುವು ನಿಶ್ಚಿತ’, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಲೈಕ್ಸ್‌, ಪ್ರಚಾರ ಬಿರುಸು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 MAY 2024

SHIMOGA : ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದಿಂದ ಎಸ್‌.ಎಲ್.ಭೋಜೇಗೌಡ ದೊಡ್ಡ ಅಂತರದಲ್ಲಿ ಗೆಲುವು (win) ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಮಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭಯಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನಿರ್ಧಾರದಂತೆ ಶ್ರಮ ಹಾಕುತ್ತಿದ್ದಾರೆ ಎಂದರು.

Dr Dhananjaya Sarji Campaign

ನಿರಂತರ ಪ್ರಚಾರದಲ್ಲಿ ಡಾ. ಸರ್ಜಿ

ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್‌.ಎಲ್.‌ ಭೋಜೇಗೌಡ ಅವರು ಜಂಟಿ ಪ್ರಚಾರ ನಡೆಸುತ್ತಿದ್ದಾರೆ. ಚಿಕ್ಕಮಗಳೂರು, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಮತದಾರರನ್ನು ಭೇಟಿಯಾಗಿ ಮತಯಾಚಿಸುತ್ತಿದ್ದರೆ. ಕಿರು ಸಭೆಗಳನ್ನು ನಡೆಸಿ ತಮ್ಮ ಗುರಿ, ಉದ್ದೇಶ ತಿಳಿಸುತ್ತಿದ್ದಾರೆ. ಭಾನವಾರ ಮತ್ತು ಸೋಮವಾರ ಕೊಡಗು, ಚಿಕ್ಕಮಗಳೂರು, ಉಡುಪಿ, ಮಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳಿಗೆ ತೆರಳಿ ಮತಯಾಚಿಸಿದರು.

ಅಬ್ಬರದ ಪ್ರಚಾರ ಮುಂದುವರೆಸಿದ ಪತ್ನಿ

ಇನ್ನೊಂದೆಡೆ ಡಾ. ಧನಂಜಯ ಸರ್ಜಿ ಪತ್ನಿ ನಮಿತಾ ಸರ್ಜಿ ಶಿವಮೊಗ್ಗದಲ್ಲಿ ಪ್ರಚಾರ ಮುಂದುವರೆಸಿದ್ದಾರೆ. ಕುವೆಂಪು ಶತಮಾನೋತ್ಸವ ಶಿಕ್ಷಣ ಸಂಸ್ಥೆ, ಪೋದಾರ್‌, ಪ್ರಿಯದರ್ಶಿನಿ ಶಾಲೆ, ಕೇಂಬ್ರಿಡ್ಜ್‌ ಶಾಲೆ, ಎಜುರೈಟ್‌ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮತಯಾಚನೆ ಮಾಡಿದರು. ಡಾ. ರಜತ್‌, ನಾಗವೇಣಿ ಸರ್ಜಿ ಸೇರಿದಂತೆ ಹಲವರು ಜೊತೆಗಿದ್ದರು.

Dr Dhananjaya Sarji Campaign

ಸೋಷಿಯಲ್‌ ಮೀಡಿಯಾದಲ್ಲಿ ಲೈಕ್ಸ್‌

ಸಾಮಾಜಿಕ ಜಾಲತಾಣಗಳಲ್ಲಿ ಡಾ. ಧನಂಜಯ ಸರ್ಜಿ ಪರವಾದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ದೇಶಕ್ಕೆ ಮೋದಿ, ಪದವೀಧರರ ಕ್ಷೇತ್ರಕ್ಕೆ ಸರ್ಜಿ ಎಂಬ ಪೋಸ್ಟರ್‌ಗಳು ಹೆಚ್ಚು ಷೇರ್‌, ಲೈಕ್‌ ಗಿಟ್ಟಿಸುತ್ತಿವೆ.

Dr Dhananjaya Sarji Campaign

ಇದನ್ನೂ ಓದಿ – ಪ್ರಚಾರ ಬಿರುಸುಗೊಳಿಸಿದ ಬಿಜೆಪಿ, ಡಾ. ಧನಂಜಯ ಸರ್ಜಿ ಪರ ಅಖಾಡಕ್ಕಿಳಿದ ಪತ್ನಿ, ಎಲ್ಲೆಲ್ಲಿ ಹೇಗಿದೆ ಕ್ಯಾಂಪೇನ್?

ಬಿಜೆಪಿಯಿಂದ ಗ್ರೌಂಡ ಲೆವೆಲ್‌ ಪ್ರಚಾರ

ಇತ್ತ ಬಿಜೆಪಿ ಮುಖಂಡರು, ಕಾರ್ಯಕರ್ತರು ಗ್ರೌಂಡ್‌ ಲೆವೆಲ್‌ ಪ್ರಚಾರ ಶುರು ಮಾಡಿದ್ದಾರೆ. ಮತದಾರರನ್ನು ವೈಯಕ್ತಿಕವಾಗಿ ಭೇಟಿಯಾಗಿ ಡಾ. ಧನಂಜಯ ಸರ್ಜಿ ಅವರ ಪರ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರು ಅಖಾಡಕ್ಕಿಳಿದಿದ್ದಾರೆ.

Dr Dhananjaya Sarji Campaign

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment