ಖಚಿತ ಮಾಹಿತಿ ಮೇರೆಗೆ ಸಾಗರದಲ್ಲಿ ಪೊಲೀಸರ ದಾಳಿ, ಮಾಲು ಸಹಿತ ಮೂವರು ಅರೆಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 JUNE 2024

SAGARA : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಾಗರ ಪೊಲೀಸರು ದಾಳಿ (Raid) ನಡೆಸಿ ಮಾಲು ಸಹಿತ ಮೂವರನ್ನು ಬಂಧಿಸಿದ್ದಾರೆ. ಸಾಗರ ಪಟ್ಟಣದ ಎಳ್ಳಾರೆ ಕ್ರಾಸ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ರಾಘವೇಂದ್ರ, ಹೊಸೂರು ಮರಾಠಿ ಗ್ರಾಮದ ರಮೇಶ್‌, ಕದರೂರು ಗ್ರಾಮದ ಪ್ರವೀಣ್‌ ಬಂಧಿತರು. ಇವರಿಂದ 23 ಸಾವಿರ ರೂ. ಮೌಲ್ಯದ 790 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ ಟಿ.ನಾಯಕ್‌, ಇನ್ಸ್‌ಪೆಕ್ಟರ್‌ ಸೀತಾರಾಂ, ಪಿಎಸ್‌ಐ ನಾಗರಾಜ್‌ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ – ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment