ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JULY 2024
DAM LEVEL : ಮಲೆನಾಡು ಭಾಗದಲ್ಲಿ ಮಳೆ ಜೋರಾಗಿದೆ. ಹಾಗಾಗಿ ಜಲಾಶಯಗಳಿಗೆ ಉತ್ತಮ ಒಳ ಹರಿವು ಇದೆ. ಮಳೆ ಏರಿಳಿತದಂತೆಯೇ ಒಳ ಹರಿವು ಪ್ರಮಾಣ ಹೆಚ್ಚು ಕಡಿಮೆಯಾಗುತ್ತಿದೆ. ಇವತ್ತು ಯಾವ್ಯಾವ ಜಲಾಶಯಕ್ಕೆ ಎಷ್ಟು ಒಳ ಹರಿವು ಇದೆ ಎಂಬುದರ ವಿವರ ಇಲ್ಲಿದೆ.
> ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1755 ಅಡಿ ಇದೆ. ಒಳ ಹರಿವು 19,950 ಕ್ಯೂಸೆಕ್ ಇದೆ. 2055.1 ಕ್ಯೂಸೆಕ್ ಹೊರ ಹರಿವು ಇದೆ.
> ಭದ್ರಾ ಜಲಾಶಯ
ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಸದ್ಯ 126.3 ಅಡಿಯಷ್ಟು ನೀರಿನ ಸಂಗ್ರಹವಿದೆ. 5324 ಕ್ಯೂಸೆಕ್ ಒಳ ಹರಿವು ಇದೆ. 347 ಕ್ಯೂಸೆಕ್ ಹೊರ ಹರಿವು ಇದೆ.
> ತುಂಗಾ ಜಲಾಶಯ
ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹದ ಗರಿಷ್ಠ ಮಟ್ಟ 588.24 ಮೀಟರ್. ಇವತ್ತು 586.11 ಮೀಟರ್ ವರೆಗೆ ನೀರಿನ ಸಂಗ್ರಹವಿದೆ. ಒಳ ಹರಿವು 12,925 ಕ್ಯೂಸೆಕ್ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
ಇದನ್ನೂ ಓದಿ – ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಮಳೆ ಜೋರು, ಉಳಿದೆಡೆ ಎಷ್ಟಾಗಿದೆ ವರ್ಷಧಾರೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422