ಶಿವಮೊಗ್ಗ – ಚೆನ್ನೈ ರೈಲಿನ ವೇಳಾಪಟ್ಟಿ ಪ್ರಕಟ, ಎಲ್ಲೆಲ್ಲಿ ಸ್ಟಾಪ್‌ ಇರುತ್ತೆ? ಎಷ್ಟು ಬೋಗಿಗಳಿರುತ್ತವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 JULY 2024

RAILWAY NEWS : ಶಿವಮೊಗ್ಗ – ಚೆನ್ನೈ ಮಧ್ಯೆ ನೂತನ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ದಿನಾಂಕ (Time Table) ಪ್ರಕಟಿಸಿದೆ. ಜು.13ರಂದು ಸಂಜೆ 4.15ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ರಾರಂಭದಲ್ಲಿ ವಾರಕ್ಕೆ ಒಮ್ಮೆ ಮಾತ್ರ ಈ ರೈಲು ಸಂಚರಿಸಲಿದೆ.

ರೈಲು ಸಂಖ್ಯೆ 12691 ಎಂಜಿಆರ್‌ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣ – ಶಿವಮೊಗ್ಗ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಲಿದೆ. ರೈಲು ಸಂಖ್ಯೆ 12692 ಶಿವಮೊಗ್ಗ ನಿಲ್ದಾಣ – ಎಂಜಿಆರ್‌ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣ ಮಾರ್ಗದಲ್ಲಿ ಸಂಚರಿಸಲಿದೆ.

ಚೆನ್ನೈ – ಶಿವಮೊಗ್ಗ ಎಲ್ಲೆಲ್ಲಿ ಸ್ಟಾಪ್‌ ಇದೆ?

ಶುಕ್ರವಾರ ರಾತ್ರಿ 11.30ಕ್ಕೆ ಎಂಜಿಆರ್‌ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣದಿಂದ ಹೊರಟು ರಾತ್ರಿ 12.23ಕ್ಕೆ ಅರಕೋಣಂ, ರಾತ್ರಿ 12.43ಕ್ಕೆ ಶೋಲಿಂಘುರ್‌, ರಾತ್ರಿ 1.23ಕ್ಕೆ ಕಾಟ್ಪಾಡಿ, ರಾತ್ರಿ 2.54ಕ್ಕೆ ಜೋಲಾರ್‌ಪೆಟ್ಟೈ ಜಂಕ್ಷನ್‌, ರಾತ್ರಿ 3.45ಕ್ಕೆ ಬಂಗಾರಪೇಟೆ , ರಾತ್ರಿ 4.39ಕ್ಕೆ ಕೃಷ್ಣರಾಜಪುರಂ, ಬೆಳಗ್ಗೆ 5.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಳಗ್ಗೆ 7.38ಕ್ಕೆ ತುಮಕೂರು, ಬೆಳಗ್ಗೆ 9.04ಕ್ಕೆ ತಿಪಟೂರು, ಬೆಳಗ್ಗೆ 9.30ಕ್ಕೆ ಅರಸೀಕೆರೆ, ಬೆಳಗ್ಗೆ 10.05ಕ್ಕೆ ಬೀರೂರು, ಬೆಳಗ್ಗೆ 10.20ಕ್ಕೆ ಕಡೂರು, ಬೆಳಗ್ಗೆ 10.47ಕ್ಕೆ ತರೀಕೆರೆ, ಬೆಳಗ್ಗೆ 11.33ಕ್ಕೆ ಭದ್ರಾವತಿ, ಮಧ್ಯಾಹ್ನ 12.20ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ.

ಶಿವಮೊಗ್ಗ – ಚೆನ್ನೈ, ಎಲ್ಲೆಲ್ಲಿ ಸ್ಟಾಪ್‌ ಇದೆ?

ಶನಿವಾರ ಸಂಜೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಸಂಜೆ 5.33ಕ್ಕೆ ಭದ್ರಾವತಿ, ಸಂಜೆ 5.53ಕ್ಕೆ ತರೀಕೆರೆ, ಸಂಜೆ 6.23ಕ್ಕೆ ಕಡೂರು, ಸಂಜೆ 6.34ಕ್ಕೆ ಬೀರೂರು, ರಾತ್ರಿ 7.10ಕ್ಕೆ ಅರಸೀಕೆರೆ, ರಾತ್ರಿ 7.36ಕ್ಕೆ ತಿಪಟೂರು, ರಾತ್ರಿ 8.28 ತುಮಕೂರು, ರಾತ್ರಿ 10.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌, ರಾತ್ರಿ 11.10ಕ್ಕೆ ಕೃಷ್ಣರಾಜಪುರಂ, ರಾತ್ರಿ 11.22ಕ್ಕೆ ಬಂಗಾರಪೇಟೆ , ರಾತ್ರಿ 12.27ಕ್ಕೆ ಜೋಲಾರ್‌ಪೆಟ್ಟೈ ಜಂಕ್ಷನ್‌, ರಾತ್ರಿ 1.23ಕ್ಕೆ ಕಾಟ್ಪಾಡಿ, ರಾತ್ರಿ 2.33ಕ್ಕೆ ಶೋಲಿಂಘುರ್‌, ರಾತ್ರಿ 3.03ಕ್ಕೆ ಅರಕೋಣಂ, ಬೆಳಗ್ಗೆ 4.13ಕ್ಕೆ ಪೆರಂಬೂರು, ಬೆಳಗ್ಗೆ 4.55ಕ್ಕೆ ಎಂಜಿಆರ್‌ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣ ತಲುಪಲಿದೆ.

ರೈಲಿಗೆ ಎಷ್ಟು ಬೋಗಿಗಳಿವೆ?

ಶಿವಮೊಗ್ಗ – ಚೆನ್ನೈ ರೈಲಿನಲ್ಲಿ 22 ಬೋಗಿಗಳು ಇರಲಿವೆ. ಈ ಪೈಕಿ ಒಂದು ಎ.ಸಿ. ಬೋಗಿ, ಎರಡು 2 ಟೈರ್‌ ಎ.ಸಿ ಬೋಗಿ, ಆರು 3 ಟೈರ್‌ ಎ.ಸಿ. ಬೋಗಿ, ಆರು ಸ್ಲೀಪರ್‌ ಬೋಗಿ, ಎರಡು ಸಕೆಂಡ್‌ ಸಿಟ್ಟಿಂಗ್‌, ಒಂದು ಎಸ್‌ಎಲ್‌ಆರ್‌, ಒಂದು ಪವರ್‌ ಕಾರ್‌ ಬೋಗಿ ಇರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ – ಶಂಕರಘಟ್ಟದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ, ಕುವೆಂಪು ವಿವಿಯಲ್ಲಿ ತರಗತಿ ಬಹಿಷ್ಕಾರ, ಮೆರವಣಿಗೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 11, 2024

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

Leave a Comment