SHIVAMOGGA LIVE NEWS | 17 JULY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIKARIPURA : ಭರ್ತಿಯಾಗಿರುವ ಅಂಜನಾಪುರ ಜಲಾಶಯಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಇವತ್ತು ಕುಟುಂಬ ಸಹಿತ ಭೇಟಿ ನೀಡಿ, ಬಾಗಿನ (Bagina) ಅರ್ಪಿಸಿದರು. ನಂತರ ಅಂಬ್ಲಿಗೋಳ ಜಲಾಶಯದಲ್ಲಿಯು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಶಾಸಕ, ಸಂಸದರು ಹೇಳಿದ್ದೇನು?
ಅಂಜನಾಪುರದಲ್ಲಿ ಬಾಗಿನ ಅರ್ಪಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದರು. ಅದರ ಪರಿಣಾಮ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲು ಅನುಕೂಲವಾಗಿದೆ. ಇನ್ನು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೆಲವು ಗ್ರಾಮಗಳ ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಂಡಿಲ್ಲ. ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ ಕಾಮಗಾರಿಗು ಹಣ ಬಿಡುಗಡೆಯಾಗಿಲ್ಲ ಎಂದರು.ಏತ ನೀರಾವರಿಯಿಂದ ಕೆರೆಗಳು ಭರ್ತಿ

ಇದನ್ನೂ ಓದಿ ⇓
‘ತುಕ್ಕು ಹಿಡಿಯುತ್ತಿದೆ’ ಅಂಜನಾಪುರ ರಾಕ್ ಗಾರ್ಡನ್, ಪ್ರವಾಸಿಗರನ್ನು ಸೆಳೆಯಬೇಕಿದ್ದ ಪಾರ್ಕ್ ಸೊರಗಿದ್ದೇಕೆ?
ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅಂಜನಾಪುರ ಜಲಾಶಯ ಭರ್ತಿ ಆಗಿರುವುದು ಸಂತಸ ಮೂಡಿಸಿದೆ. ರೈತರು ನೆಮ್ಮದಿಯಿಂದ ಬೆಳೆ ಬೆಳೆಯಬಹುದು. ಯಡಿಯೂರಪ್ಪ ಅವರು ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ ಸಂಕಷ್ಟ ನಿವಾರಿಸಿದ್ದಾರೆ ಎಂದರು.‘ರೈತರ ಸಂಕಷ್ಟ ನಿವಾರಿಸಿದ್ದಾರೆ’

ಪ್ರಮುಖರಾದ ಕೆ.ಎಸ್.ಗುರುಮೂರ್ತಿ, ತೇಜಸ್ವಿನಿ ರಾಘವೇಂದ್ರ, ಪ್ರೇಮಾ ವಿಜಯೇಂದ್ರ, ಹುಲ್ಮಾರು ಮಹೇಶ್, ಹನುಮಂತಪ್ಪ, ಸಿದ್ಧಲಿಂಗ, ಚನ್ನವೀರಪ್ಪ, ಭೂಕಾಂತ್, ಗಾಯತ್ರಿ ಮಲ್ಲಪ್ಪ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇓
ಶಿವಮೊಗ್ಗದಲ್ಲಿ ಒಂದೇ ದಿನ ಶೇ.50ರಷ್ಟು ಮಳೆ ಕಡಿಮೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





