SHIVAMOGGA LIVE NEWS | 18 JULY 2024
EDUCATION NEWS : ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ (Protest) ಈಡೇರಿಸುವಂತೆ ಆಗ್ರಹಿಸಿ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂಭಾಗ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅತಿಥಿ ಉಪನ್ಯಾಸಕರ ಬೇಡಿಕಗಳೇನು?
ಡಿಮಾಂಡ್ 1 : ಅತಿಥಿ ಉಪನ್ಯಾಸಕರಿಗೆ ಸರ್ಕಾರ ಆದೇಶಿಸಿರುವಂತೆ ಸವಲತ್ತು ಮತ್ತು ವೇತನವನ್ನು ಕೂಡಲೇ ಜಾರಿಗೊಳಿಸಬೇಕು. ಈ ವರ್ಷದ ಜನವರಿ ತಿಂಗಳಿಂದ ಅನ್ವಯವಾಗುವಂತೆ ಬಾಕಿ ವೇತನ ಪಾವತಿಸಬೇಕು. 11 ತಿಂಗಳು ವೇತನ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ವೇತನ ಪಾವತಿಸಬೇಕು.
ಡಿಮಾಂಡ್ 2 : ಪ್ರತಿ ಶೈಕ್ಷಣಿಕ ವರ್ಷ ಅತಿಥಿ ಉಪನ್ಯಾಸಕರ ಸಂದರ್ಶನ ನಡೆಸಲಾಗುತ್ತಿದೆ. ಇದನ್ನು ರದ್ದುಗೊಳಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕು ಈಗಿರುವ ಅತಿಥಿ ಉಪನ್ಯಾಸಕರನ್ನೆ ಮುಂದುವರೆಸಬೇಕು. ಈ ಮೂಲಕ ಸೇವಾ ಭದ್ರತೆ ಒದಗಿಸಬೇಕು.
ಡಿಮಾಂಡ್ 3 : ಅತಿಥಿ ಉಪನ್ಯಾಸಕರ ಪದನಾಮವನ್ನು, ಸಹಾಯಕ ಬೋಧಕರು ಎಂದು ಬದಲಾವಣೆ ಮಾಡಬೇಕು. ಇನ್ನು, ಕುಲಸಚಿವರು ಸೇವಾ ಅನುಭವದ ಪ್ರಮಾಣ ಪತ್ರವನ್ನು ನೀಡಬೇಕು. ಮೌಲ್ಯಮಾಪನ, ಸ್ಕ್ವಾಡ್ ಡ್ಯೂಟಿ ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲ ಕಾರ್ಯ ಚಟುವಟಿಕೆಯಲ್ಲು ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.