ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 JULY 2024
SAGARA NEWS : ಈ ಬಾರಿ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ (Rain). ಇದರಿಂದ ವಿವಿಧೆಡೆ ಧರೆ ಕುಸಿತ, ಆಸ್ತಿಪಾಸ್ತಿ ಹಾನಿಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.
ಸಾಗರ ತಾಲೂಕಿನಲ್ಲಿ ಜುಲೈ ತಿಂಗಳ ವಾಡಿಕೆ ಮಳೆ 847.70 ಮಿ.ಮೀ. ಆದರೆ ಈವರೆಗೂ ತಾಲೂಕಿನಲ್ಲಿ 1071.40 ಮಿ.ಮೀ ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಹಾನಿಯ ಭೀತಿ ಎದುರಾಗಿದೆ.
ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಚಗೋಡು ಗ್ರಾಮದಲ್ಲಿ ಗುಡ್ಡ ಜರಿದು ಕಲ್ಲು, ಮಣ್ಣು ಸಮೀಪದ ಹಳ್ಳಕ್ಕೆ ಬಿದ್ದಿದೆ. ಹಳ್ಳದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದ್ದು, ರೈತರಲ್ಲಿ ಆಂತಕ ಮೂಡಿಸಿದೆ. ಸುಮಾರು ಆರೇಳು ಎಕರೆ ತೋಟಕ್ಕೆ ಹಳ್ಳದ ನೀರು ನುಗ್ಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.![]()
ಧರೆ ಕುಸಿತ, ತೋಟಗಳು ಜಲಾವೃತ

ಕರೂರು ಹೋಬಳಿಯ ಹೊಸಮನೆಯ ಬೀರಾನಾಯ್ಕ ಅವರ ಮನೆ ಹಿಂಭಾಗದ ಕೊಟ್ಟಿಗೆ ಕುಸಿದಿದೆ. 9 ಜಾನುವಾರುಗಳನ್ನು ರಕ್ಷಿಸಲಾಗಿದೆ. 3 ಜಾನುವಾರುಗಳು ಗಂಭೀರ ಗಾಯಗೊಂಡಿವೆ. ಹುಲ್ಲು, ಹೆಂಚ್ಚು, ನಾಟಕ್ಕೆ ಹಾನಿಯಾಗಿದೆ. ಸುಮಾರು 1 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಸಲಾಗಿದೆ.![]()
ಗಾಳಿ, ಮಳೆಗೆ ಕುಸಿದ ಕೊಟ್ಟಿಗೆ

ಸಾಗರ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ 530 ಹೆಕ್ಟೇರ್ ಭತ್ತದ ಗದ್ದೆ, 4.4 ಹೆಕ್ಟೇರ್ ಅಡಿಕೆ ತೋಟ ಜಲಾವೃತವಾಗಿದೆ. ತಾಳಗುಪ್ಪ ಹೋಬಳಿಯ ಬೀಸನಗದ್ದೆ ಭಾಗದಲ್ಲಿ 150 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ. ಜುಲೈ ತಿಂಗಳಲ್ಲಿ ಈವರೆಗೆ 20 ಮನೆಗಳು, 7 ಕೊಟ್ಟಿಗೆಗಳು ಹಾನಿಯಾಗಿವೆ. 1 ಜಾನುವಾರು ಮೃತಪಟ್ಟಿದೆ.![]()
530 ಹೆಕ್ಟೇರ್ ಗದ್ದೆಗೆ ಹಾನಿ

ಮಳೆ ಹಾನಿಗೆ ಸಂಬಂಧಿಸಿದಂತೆ ಸಾಗರ ತಾಲೂಕು ಆಡಳಿತ ಸಹಯವಾಣಿ ಸ್ಥಾಪಿಸಿದೆ. ತುರ್ತು ನೆರವು ಅಗತ್ಯವಿದ್ದವರು ಈ ನಂಬರ್ಗೆ ಕರೆ ಮಾಡಬಹುದಾಗಿದೆ. ಸಹಾಯವಾಣಿ ಸಂಖ್ಯೆ 08183 226074 ಸಂಪರ್ಕಿಸಬಹುದಾಗಿದೆ.![]()
ಸಹಾಯವಾಣಿ ಸ್ಥಾಪಿಸಿದ ಆಡಳಿತ
ಇದನ್ನೂ ಓದಿ ⇓
ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್ ಅಲರ್ಟ್, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
LATEST NEWS
- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

- ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

About The Editor
ನಿತಿನ್ ಆರ್.ಕೈದೊಟ್ಲು














