SHIMOGA, 26 JULY 2024 : ಅರಸಾಳು ಬಳಿ ರೈಲ್ವೆ ಹಳಿಗೆ (Tree) ಅಡ್ಡಲಾಗಿ ಮರ ಬಿದ್ದಿರುವುದರಿಂದ ಶಿವಮೊಗ್ಗ – ಸಾಗರ ನಡುವೆ ರೈಲು ಸಂಚಾರ ವ್ಯತ್ಯಯವಾಗಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟಿದ್ದ ಇಂಟರ್‌ಸಿಟಿ ರೈಲು ಅರಸಾಳು ನಿಲ್ದಾಣದಲ್ಲಿ ನಿಂತಿದೆ.
ಸೂಡೂರು ಬಳಿ ರೈಲು ಹಳಿಗೆ ಅಡ್ಡಲಾಗಿ ಮರ ಬಿದ್ದಿದೆ. ಕರೆಂಟ್ ವಯರ್ ತುಂಡಾಗಿ ರೈಲಿನ ಮೇಲೆ ಬಿದ್ದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇದರಿಂದ ರೈಲು ಸಂಚಾರ ವ್ಯತ್ಯಯವಾಗಿದೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಇಂಟರ್‌ಸಿಟಿ ರೈಲು, ರಾತ್ರಿ 7.47ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಟಿತ್ತು. ರಾತ್ರಿ 8.23ಕ್ಕೆ ಅರಸಾಳು ನಿಲ್ದಾಣದ ಬಳಿ ಇಂಟರ್ ಸಿಟಿ ರೈಲು ನಿಂತಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ತುಂಗಾ ಡ್ಯಾಮ್ ಒಳ, ಹೊರ ಹರಿವು ತುಸು ಹೆಚ್ಚಳ, ಭದ್ರಾ, ಲಿಂಗನಮಕ್ಕಿಗೆ ಎಷ್ಟು ನೀರು ಹರಿದು ಬರುತ್ತಿದೆ?

ಈ ಸುದ್ದಿಯನ್ನೂ ಓದಿ
ಸವಳಂಗ ರಸ್ತೆಯಲ್ಲಿ ದರೋಡೆ ಕೇಸ್, ಇಬ್ಬರು ಆರೋಪಿಗಳು ಅರೆಸ್ಟ್, ಯಾರದು?