ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 20 AUGUST 2024 : ಬಾಂಗ್ಲಾದೇಶ ಮಾದರಿಯಲ್ಲಿ ರಾಜ್ಯಭವನದ ಮೇಲೆ ದಾಳಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಹೇಳಿಕೆಗೆ ಶಿವಮೊಗ್ಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಚೋದನಕಾರಿ ಹೇಳಿಕೆ ನೀಡಿದ ಐವಾನ್ ಡಿಸೋಜ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಜಿಲ್ಲಾರಕ್ಷಣಾಧಿಕಾರಿಗೆ ಬಿಜೆಪಿ ದೂರು (Complaint) ನೀಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಶಿವಮೊಗ್ಗ ಬಿಜೆಪಿ ವತಿಯಿಂದ ದೂರು ನೀಡಲಾಗಿದೆ. ಐವಾನ್ ಡಿಸೋಜಾ ತಮ್ಮ ಕಾರ್ಯಕರ್ತರಿಗೆ ದೇಶ ವಿರೋಧಿ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶವಿದೆ. ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲು ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ಇದನ್ನೂ ಓದಿ ⇒ ಸಿದ್ದರಾಮಯ್ಯ ಪಾದ ಪೂಜೆಗೆ ರೆಡಿ, ಶಿವಮೊಗ್ಗ MLA ಸವಾಲು, ಇಲ್ಲಿದೆ ಸುದ್ದಿಗೋಷ್ಠಿಯ ಪ್ರಮುಖ 5 ಪಾಯಿಂಟ್
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಐವಾನ್ ಡಿಸೋಜ ಅವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅಂತಹ ಘಟನೆಗಳು ಸಂಭವಿಸಿದೆ ಅವರೆ ಹೊಣೆ ಹೊರಬೇಕಾಗುತ್ತದೆ. ಕಾನೂನಿಗೆ ಎಲ್ಲರು ತಲೆಬಾಗಬೇಕು. ಸಿದ್ದರಾಮಯ್ಯ ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರೆ. ಎಂಟತ್ತು ದಿನದಲ್ಲಿ ಎಲ್ಲ ಊಹಾಪೋಹಕ್ಕೆ ತೆರೆಬೀಳಲಿದೆ. ಈ ಹಿಂದೆ ನಮ್ಮ ಪಕ್ಷವು ರಾಜ್ಯಪಾಲರ ನಿರ್ಧಾರಗಳ ವಿರುದ್ಧ ಹೋರಾಟ ನಡೆಸಿದೆ. ಆದರೆ ಅವಾಚ್ಯ ಬೈಗುಳ, ಪಾದರಕ್ಷೆಗಳಿಂದ ರಾಜ್ಯಪಾಲರ ಭಾವಚಿತ್ರಕ್ಕೆ ಹೊಡೆಯುವುದು, ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ ⇒ ವೇಶ್ಯಾವಾಟಿಕೆ ಆರೋಪ, ಶಿವಮೊಗ್ಗದಲ್ಲಿ ಸ್ಪಾ ಮೇಲೆ ಪೊಲೀಸ್ ದಾಳಿ