ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
GOOD MORNING NEWS, 28 AUGUST 2024
ಸಣ್ಣ ವಿಷಯಗಳನ್ನು ಆನಂದಿಸಲು ಆರಂಭಿಸಿ, ನಿಮ್ಮ ದಿನವು ಪ್ರಕಾಶಮಾನವಾಗಿರುತ್ತದೆ.
ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದೆ. ಇದರಿಂದ ವಾತಾವರಣ ತಂಪಾಗಿದೆ. ತಾಪಮಾನವು ತುಸು ಇಳಿಕೆಯಾಗಿದೆ. ಇವತ್ತು ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 21 ಡಿಗ್ರಿ, ತೀರ್ಥಹಳ್ಳಿ ಗರಿಷ್ಠ 30 ಡಿಗ್ರಿ, ಕನಿಷ್ಠ 23 ಡಿಗ್ರಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಇದನ್ನೂ ಓದಿ ⇒ ದಿನ ಭವಿಷ್ಯ | 28 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?
ಚಿನ್ನದ ದರ * ಕಡೆ ಕ್ಷಣದ ಬದಲಾವಣೆ ಹೊರತುಪಡಿಸಿ. ಮಾರುಕಟ್ಟೆಯಲ್ಲಿ ಈ ದರ ಆಗಾಗ ಬದಲಾಗುತ್ತದೆ.
22 ಕ್ಯಾರೆಟ್ ಚಿನ್ನ
24 ಕ್ಯಾರೆಟ್ ಚಿನ್ನ
₹ 6694
₹ 7303
ಶಿವಮೊಗ್ಗ ಮಾರುಕಟ್ಟೆ ಸಾಗರ ಮಾರುಕಟ್ಟೆ ಇತರೆ ಮಾರುಕಟ್ಟೆ ಅಡಿಕೆ ಧಾರಣೆ
ಗೊರಬಲು
16000
35169
ಬೆಟ್ಟೆ
42014
54701
ರಾಶಿ
30000
48100
ಸರಕು
46000
80321
ಕೆಂಪುಗೋಟು
30299
30299
ಕೋಕ
16989
16989
ಚಾಲಿ
26588
32409
ಬಿಳೆ ಗೋಟು
23209
24609
ರಾಶಿ
35299
47329
ಸಿಪ್ಪೆಗೋಟು
14744
17315
ಚನ್ನಗಿರಿ
ರಾಶಿ
34000
48621
ತೀರ್ಥಹಳ್ಳಿ
ಸಿಪ್ಪೆಗೋಟು
15000
15000
ಭದ್ರಾವತಿ
ರಾಶಿ
35199
48300
ಇದನ್ನೂ ಓದಿ ⇒ ಸಿಟಿ ಬಸ್ಸಿನಲ್ಲಿ ಟಿಕೆಟ್ ಹಣಕ್ಕೆ ವ್ಯಾನಿಟಿ ಬ್ಯಾಗ್ ತೆಗೆಯಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್
ಸಹ್ಯಾದ್ರಿ ಕಾಲೇಜು : ಪರೀಕ್ಷಾ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಕೂಡಲೆ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡಸಿದರು. ಪ್ರಾಂಶುಪಾಲರ ಮೂಲಕ ಕಲಪತಿಗೆ ಮನವಿ ಸಲ್ಲಿಸಿದರು. ಬಿಜೆಪಿ ಕಚೇರಿ : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ನಲ್ಕೂವರೆ ತಿಂಗಳಾಗಿದೆ. ಪ್ರಥಮ ಪದವಿ ಪ್ರವೇಶಕ್ಕೆ ಈವರೆಗೂ ಕುವೆಂಪು ವಿವಿ ಪ್ರಕಟಣೆ ಹೊರಡಿಸಿಲ್ಲ. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಗರಂ. ಬಿಜೆಪಿ ಕಚೇರಿ : ಸದಸ್ಯತ್ವ ಅಭಿಯಾನ ಕಾರ್ಯಾಗಾರ. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟನೆ. ಸಂಸದ ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿ ಹಲವರು ಭಾಗಿ. ಪತ್ರಿಕಾ ಭವನ : ರಾಜ್ಯ ಒಕ್ಕಲಿಗರ ಸಂಘದ ಮಹಿಳಾ ಘಟಕ ಮತ್ತು ಜಿಲ್ಲಾ ಘಟಕದ ವತಿಯಿಂದ ಸೆ.1ರಂದು ಶ್ರಾವಣ ಮಾಸ ಕುರಿತು ಗಾಯನ ಸ್ಪರ್ಧೆ, ವಿದ್ಯಾರ್ಥಿಗಳನ್ನು ಪುರಸ್ಕಾರಿಸು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪ ತಿಳಿಸಿದರು. ಪತ್ರಿಕಾ ಭವನ : ಸಹಚೇತನ ನಾಟ್ಯಾಲಯ ವತಿಯಿಂದ ಆ.30 ರಿಂದ ಸೆ.1ರವರೆಗೆ ಕುವೆಂಪು ರಂಗಮಂದಿರದಲ್ಲಿ 13ನೇ ವರ್ಷದ ನಾಟ್ಯಾರಾಧನೆ ರಾಷ್ಟ್ರೀಯ ನೃತ್ಯ ಮಹೋತ್ಸವ ಆಯೋಜಿಸಲಾಗಿದೆ ಎಂದು ಸಹನಾ ಚೇತನ್ ತಿಳಿಸಿದರು. ಶಿವಮೊಗ್ಗ : ಆ.28 ರಿಂದ 30ರವರೆಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಟ್ರೇಡ್ ಲೈಸೆನ್ಸ್ ಮೇಳ ಆಯೋಜಿಸಲಾಗಿದೆ ಎಂದು ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ್ ತಿಳಿಸಿದ್ದಾರೆ. ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಯಾಗಬೇಕಿದೆ. ಕಾಂಗ್ರೆಸ್ ನಾಯಕರು ಕ್ಷುಲಕ ಹೇಳಿಕೆ ನಿಲ್ಲಿಸಿಬೇಕು. ಸಿಎಂ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಸಂಸದ ರಾಘವೇಂದ್ರ ಆಗ್ರಹ. ಜಿಲ್ಲಾಧಿಕಾರಿ ಕಚೇರಿ : ರೈತರು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲು ಅವಕಾಶವಿದೆ. ಸೆ.30ರವರೆಗೆ ಬೆಳೆ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಕೇಂದ್ರ ಕಾರಾಗೃಹ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ನನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಸಹಚರರಾದ ಜಗದೀಶ್ ಮತ್ತು ಲಕ್ಷ್ಮಣ್ನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. » SHIMOGA CITY NEWS
ಇದನ್ನೂ ಓದಿ ⇒ ಸೇತುವೆಯಿಂದ ಕೆಳಗೆ ಹಾರಿದ ಕಾರು | ಬಸ್ ಗುದ್ದಿ ಎಮ್ಮೆಗಳು ಸಾವು – 3 ಫಟಾಫಟ್ ನ್ಯೂಸ್
ಸಾಗರ : ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತ ಮೈದುಂಬಿಕೊಂಡಿದೆ. ಜೋಗ – ಕಾರ್ಗಲ್ : ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಎಂ.ರಾಜು, ಉಪಾಧ್ಯಕ್ಷರಾಗಿ ಬಿಜೆಪಿಯ ಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಬಹುಮತ ಇದ್ದರು ಕಾಂಗ್ರೆಸ್ ಅಧ್ಯಕ್ಷ ಗಾದಿ ಹಿಡಿದಿದ್ದಾರೆ. ಆನಂದಪುರ : ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಮಹಿಳಾ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳಿಂದ ಬಸ್ ನಿಲ್ದಾಣದ ಸರ್ಕಲ್ನಲ್ಲಿ ಪ್ರತಿಭಟನೆ. ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ನ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾಗಿ ಗೀತಾ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಅಸಾದಿ ಅವರು ಉಪಾಧ್ಯಕ್ಷರಾಗಿದ್ದು, ಗೀತಾ ಅವರು ಅಧ್ಯಕ್ಷರಾಗಿದ್ದರು. ಈಗ ಸ್ಥಾನ ಬದಲಾಗಿದೆ. ಭದ್ರಾವತಿ : ಗಾಂಧಿ ನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಆ.29 ರಿಂದ ಸೆ.8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಗುರು ಸ್ಟೀವನ್ ಡೆಸಾ ತಿಳಿಸಿದ್ದಾರೆ. ಭದ್ರಾವತಿ : ಎಪಿಎಂಸಿ ಪ್ರಾಂಗಣದಲ್ಲಿರುವ ವರ್ತಕರ ಸಂಘದ ಕಚೇರಿಯನ್ನು ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು. » TALUK NEWS
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422