ಶಿವಮೊಗ್ಗ ದಸರಾ | ಇವತ್ತು ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಇರುತ್ತೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

DASARA NEWS, 3 OCTOBER 2024 : ಶಿವಮೊಗ್ಗ ನಗರದಲ್ಲಿ ವೈಭವದ ದಸರಾ ಆಚರಣೆ ಮಾಡಲಾಗುತ್ತಿದೆ. ಅದಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಇವತ್ತು ದಸರಾ ಉದ್ಘಾಟನೆ ನಡೆಯಲಿದೆ. ನಮ್ಮೂರ ದಸರಾದಲ್ಲಿ ಇವತ್ತು ಯಾವೆಲ್ಲ ಕಾರ್ಯಕ್ರಮಗಳಿವೆ? ಎಲ್ಲೆಲ್ಲಿ ಎಷ್ಟೊತ್ತಿಗೆ ಕಾರ್ಯಕ್ರಮ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.

ಸಮಯ : ಬೆಳಗ್ಗೆ 9 ಗಂಟೆ | ಸ್ಥಳ : ಶಿವಮೊಗ್ಗ ಮಹಾನಗರ ಪಾಲಿಕೆ ಆವರಣ | ನಾಡದೇವಿ ಚಾಮುಂಡೇಶ್ವರಿಯ ಅಂಬಾರಿಗೆ ಪೂಜೆ, ಮೆರವಣಿಗೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಸಮಯ : ಬೆಳಗ್ಗೆ 9 ಗಂಟೆಗೆ | ಸ್ಥಳ : ಕೋಟೆ ‍ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ | ವಿದ್ವಾನ್‌ ಅರುಣ್‌ ಕುಮಾರ್‌ ಮತ್ತು ಸಂಗಡಿಗರು, ಮಾತೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ.

ಸಮಯ : ಬೆಳಗ್ಗೆ 11 ಗಂಟೆಗೆ | ಸ್ಥಳ : ಕೋಟೆ ‍ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ | ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಅವರಿಂದ ಚಾಲನೆ.

ಸಮಯ : ಮಧ್ಯಾಹ್ನ 2.30ಕ್ಕೆ | ಸ್ಥಳ : ಕುವೆಂಪು ರಂಗಮಂದಿರ | ಸಾಂಸ್ಕೃತಿಕ ದಸರಾದಲ್ಲಿ ಸಾಹಿತ್ಯ ಸಂಭ್ರಮ ಉದ್ಘಾಟನೆ. ಕವಿಗೋಷ್ಠಿ, ಪುಟಾಣಿ ಮಕ್ಕಳಿಂದ ನೃತ್ಯ ವೈಭವ. ದಾಕ್ಷಾಯಿಣಿ ರಾಜ್‌ ಕುಮಾರ್‌ ಮತ್ತು ಸಂಗಡಿಗರು, ವಿದ್ಯಾ ಎಸ್‌ ಮತ್ತು ಸಂಗಡಿಗರಿಂದ ಸುಗಮ ಸಂಗೀತ.

ಸಮಯ : ಸಂಜೆ 5.30ಕ್ಕೆ | ಸ್ಥಳ : ಕುವೆಂಪು ರಂಗಮಂದಿರ | ಸಾಂಸ್ಕೃತಿಕ ದಸರಾದಲ್ಲಿ ಯಕ್ಷ ದಸರಾ. ನಾಟ್ಯ ಶ್ರೀ ಕಲಾ ತಂಡ, ಶಿವಮೊಗ್ಗ ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಲಂಕಾ ದಹನ ಯಕ್ಷಗಾನ. ಶ್ರೀ ಮಹಾಗಣಪತಿ ಯಕ್ಷ ಕಲಾ ಬಳಗದಿಂದ ಸುದರ್ಶನ ವಿಜಯ ಯಕ್ಷಗಾನ. ಸಹನಾ.ಪಿ.ಜಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ.

ಇದನ್ನೂ ಓದಿ » ಶಿವಮೊಗ್ಗ ದಸರಾಗೆ ಸಾಲು ಸಾಲು ಸಿನಿಮಾ ತಾರೆಯರು, ಯಾರೆಲ್ಲ, ಯಾವಾಗ ಭಾಗವಹಿಸ್ತಾರೆ?

Leave a Comment