ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SORABA NEWS, 3 OCTOBER 2024 : ಪುರಾಣ ಪ್ರಸಿದ್ಧ ಚಂದ್ರಗುತ್ತಿ ಗ್ರಾಮದಲ್ಲಿ ರೇಣುಕಾಂಬಾ ದಸರಾ (Dasara) ಉತ್ಸವ ಸಮಿತಿ, ಗ್ರಾಮಸ್ಥರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ 9ನೇ ವರ್ಷದ ರೇಣುಕಾಂಬಾ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದೆ. ಇಂದು ಸಂಜೆ 6 ಗಂಟೆಗೆ ಸಚಿವ ಮಧು ಬಂಗಾರಪ್ಪ ದಸರಾ ಉತ್ಸವ ಉದ್ಘಾಟಿಸಲಿದ್ದಾರೆ. ಸಂಜೆ ನಾಟ್ಯ ತರಂಗ ಟ್ರಸ್ಟ್ ಸಾಗರ ವತಿಯಿಂದ ಭರತನಾಟ್ಯ ನಡೆಯಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದಸರಾ ಉತ್ಸವದ ಅಂಗವಾಗಿ ನಿತ್ಯ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೊಜಿಸಲಾಗಿದೆ. ಅ.4ರಂದು ಸಂಜೆ ಜೀವನ್ಮುಖಿ ತಂಡದಿಂದ ಜಾನಪದ ನೃತ್ಯ, ಶಿವರುದ್ರಪ್ಪ ಜೋಗಿ ಮತ್ತು ತಂಡ, ಗೆಂಡ್ಲಾ-ಹೊಸೂರು ಅವರಿಂದ ಜೋಗಿಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅ.5ರಂದು ಸಂಜೆ ವೀರವರ್ಮ ಕಾಳಗ-ಯಕ್ಷ ಸಂವರ್ಧನಾ ಸಭಾದಿಂದ ‘ಯಕ್ಷಗಾನ’ ಪ್ರದರ್ಶನವಿದೆ. ಅ.6ರಂದು ಸಂಜೆ ಸಹ ಚೇತನ ನಾಟ್ಯಾಲಯದಿಂದ ‘ಸಮೂಹ ನೃತ್ಯ’ ಹಮ್ಮಿಕೊಳ್ಳಲಾಗಿದೆ. ಅ.7ರಂದು ಸಂಜೆ ಜ್ಯೋತಿ ಮೆಲೋಡಿಸ್‌ನಿಂದ ಆರ್ಕೆಸ್ಟ್ರಾ ನಡೆಯಲಿದೆ.
ಅ.8ರಂದು ಸಂಜೆ ಬೀರೇಶ್ವರ ಕಲಾ ಬಳಗದಿಂದ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ನಾಟಕ ಪ್ರದರ್ಶನಗೊಳ್ಳಲಿದೆ. ಅ.9ರಂದು ಸಂಜೆ ಗಂಗಾವತಿ ಪ್ರಾಣೇಶ್ ಅವರಿಂದ ‘ನಗೆ ಹಬ್ಬ’ ಹಮ್ಮಿಕೊಳ್ಳಲಾಗಿದೆ. ಅ.10ರಂದು ಯಡಗೊಪ್ಪ ಗ್ರಾಮದ ಗಾಮೇಶ್ವರ ಯುವ ಚೇತನ ಕಲಾ ಬಳಗ ನಾಟ್ಯ ಸಂಘದಿಂದ ‘ಧರ್ಮದ ನುಡಿ ಬೆಂಕಿಯ ಕಿಡಿ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಅ.11ರಂದು ಸಂಜೆ 6 ಗಂಟೆಗೆ ನಟನಂ ಬಾಲ ಕೇಂದ್ರದಿಂದ ‘ಜಾನಪದ ಕಲಾ ವೈಭವ’ ಆಯೋಜಿಸಲಾಗಿದೆ.
ಇದನ್ನೂ ಓದಿ » ಸಕ್ರೆಬೈಲಿನಲ್ಲಿ ಆನೆಗಳಿಗೆ ತಾಲೀಮು ಶುರು, ಹೇಗಿರುತ್ತೆ ಟ್ರೈನಿಂಗ್?