ಶಿವಮೊಗ್ಗ ದಸರಾಗೆ ವೈಭವದ ಚಾಲನೆ, ಹೇಗಿತ್ತು ಉದ್ಘಾಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 3 OCTOBER 2024 : ನಾಡಹಬ್ಬ ದಸರಾಗೆ (Dasara) ಶಿವಮೊಗ್ಗದಲ್ಲಿ ಚಾಲನೆ ಸಿಕ್ಕಿದೆ. ಸಿನಿಮಾ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಅವರು ದಸರಾ ಮಹೋತ್ಸವ ಉದ್ಘಾಟಿಸಿದರು. ಇದಕ್ಕೂ ಮುನ್ನ ನಾಡ ದೇವಿಯ ಅದ್ಧೂರಿ ಮೆರವಣಿಗೆ ನಡೆಯಿತು. ದಸರಾ ಮಹೋತ್ಸದ ಇಂದಿನ ಪ್ರಮುಖ ಹೈಲೈಟ್‌ ಇಲ್ಲಿವೆ.

» ಪಾಲಿಕೆಯಲ್ಲಿ ನಾಡದೇವಿಗೆ ಪೂಜೆ

ಮಹಾನಗರ ಪಾಲಿಕೆ ಆವರಣದಲ್ಲಿ ನಾಡ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್‌.ಎನ್.ಚನ್ನಬಸಪ್ಪ, ಆಯುಕ್ತೆ ಕವಿತಾ ಯೋಗಪ್ಪನವರ್‌, ಪಾಲಿಕೆ ಮಾಜಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

» ನಾಡ ದೇವಿಯ ಅದ್ಧೂರಿ ಮೆರವಣಿಗೆ

ಪಾಲಿಕೆ ಆವರಣದಿಂದ ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದವರಗೆ ನಾಡ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಪಾಲಿಕೆಯ ಅಧಿಕಾರಿಗಳು, ಮಾಜಿ ಸದಸ್ಯರು ವಾದ್ಯಗಳಿಗೆ ನೃತ್ಯ ಮಾಡಿದರು.

Shimoga Dasara 2024

» ನಾಡ ದೇವಿಗೆ ಮಂಗಳಾರತಿ

ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗ ಮೆರವಣಿಗೆ ಪೂರ್ಣಗೊಳ್ಳುತ್ತಿದ್ದಂತೆ ಚಾಮುಂಡೇಶ್ವರಿ ದೇವಿಗೆ ಮಂಗಳಾರತಿ ಬೆಳಗಲಾಯಿತು. ಸಂಸದ ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯೆ ಬಲ್ಕಿಷ್‌ ಬಾನು ಸೇರಿ ಹಲವರು ಇದ್ದರು.

Shimoga Dasara 2024

» ದೇಗುಲದಲ್ಲಿ ಬೊಂಬೆ ಪೂಜೆ

ದಸರಾ ಅಂಗವಾಗಿ ದೇಗುಲದಲ್ಲಿ ಬೊಂಬೆಗಳನ್ನು ಕೂರಿಸಲಾಗಿದೆ. ಗಣ್ಯರು ಆಗಮಿಸುತ್ತಿದ್ದಂತೆ ಬೊಂಬೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಟೆ ಚಂಡಿಕಾ ದುರ್ಗಾಪರಮೇಶ್ವರಿಯನ್ನು ಪೂಜಿಸಲಾಯಿತು. ದಸರಾ ಉದ್ಘಾಟಕ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಸೇರಿದ ಹಲವರು ಇದ್ದರು ಈ ಸಂದರ್ಭ ಹಾಜರಿದ್ದರು.

Shimoga Dasara 2024

» ದಸರಾ ಉದ್ಘಾಟಿಸಿದ ಸಿನಿಮಾ ಡೈರೆಕ್ಟರ್‌

ದೇವಸ್ಥಾನದ ಆವರಣದಲ್ಲಿ ಅಂಬಾರಿ ಮತ್ತು ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೀಪ ಬೆಳಗಿ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಉದ್ಘಾಟನೆ ನೆರವೇರಿಸಿದರು. ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳು ದಸರಾ ಗೀತೆಗೆ ನೃತ್ಯ ಮಾಡಿದರು. ಮಹಿಳೆಯರಿಗೆ ಬಾಗಿನ ನೀಡಲಾಯಿತು.

Shimoga Dasara 2024

» ‘ಕೆಟ್ಟದ್ದರ ನಾಶವೇ ಹಬ್ಬದ ಉದ್ದೇಶʼ

Shimoga Dasara 2024 - Sunil Kumar Desaiಉದ್ಘಾಟನೆ ಬಳಿಕ ಮಾತನಾಡಿದ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ, ಹಬ್ಬದ ಆಚರಣೆಗಳ ಹಿಂದೆ ಉತ್ತಮ ಉದ್ದೇಶ ಇದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇದೆ. ಕೆಟ್ಟದ್ದನ್ನು ನಾಶ ಮಾಡಬೇಕು ಎಂಬುದು ಈ ಆಚರಣೆಗಳ ಉದ್ದೇಶ. ರಾವಣ ಅತ್ಯಂತ ಪ್ರಚಂಡ, ಉತ್ತಮ ಆಡಳಿತಗಾರ, ಶಿವಭಕ್ತ. ಆದರೆ ಆತನಿಗೆ ಅಹಂಕಾರವಿತ್ತು. ಒಂಭತ್ತು ಒಳ್ಳೆಯ ಗುಣವಿದ್ದರೂ ಅಹಂಕಾರ ಇದ್ದರೆ ಪ್ರಯೋಜನವಿಲ್ಲ. ರಾಮನಿಂದ ರಾವಣನ ನಾಶವಾಗುತ್ತದೆ. ರಾವಣನ ದಹನ ಕೆಟ್ಟದ್ದರ ನಾಶದ ಸಂಕೇತವಾಗಿದೆ ಎಂದರು.

» ಯಾರೆಲ್ಲ ಏನೇನು ಹೇಳಿದರು?

ನವರಾತ್ರಿ ಒಂಭತ್ತು ದಿನ ತಾಯಿಯನ್ನು ಶ್ರದ್ಧೆಯಿಂದ ಪೂಜೆ ಮಾಡಬೇಕಿದೆ. ಪ್ರಕೃತಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರೈತರು ನೆಮ್ಮದಿಯಿಂದ ಇದ್ದರೆ ಎಲ್ಲವು ಸುಭಿಕ್ಷವಾಗಿರುತ್ತದೆ.ಬಿ.ವೈ.ರಾಘವೇಂದ್ರ, ಸಂಸದ

Shimoga Dasara 2024

ಮೈಸೂರು ಹೊರತು ಶಿವಮೊಗ್ಗ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಬಾರಿ 68 ವಿವಿಧ ಕಾರ್ಯಕ್ರಮ ನಡೆಯಲಿದೆ. ಈ ಮೊದಲು ದಸರಾ ಉದ್ಘಾಟನೆ ಮಾಡುವ ಪದ್ಧತಿ ಇರಲಿಲ್ಲ. ಮೈಸೂರಿನಲ್ಲಿ ಮಾತ್ರ ಇತ್ತು. ಅದನ್ನೂ ಪ್ರಾರಂಭಿಸಿದೆವು. ಬನ್ನಿ ಮುಡಿಯುವ ಕಾರ್ಯಕ್ರಮ, ಅಂಬಾರಿ ಉತ್ಸವವು ಇಲ್ಲಿ ವೈಭವದಿಂದ ನಡೆಯುತ್ತಿದೆ.ಎಸ್‌.ಎನ್‌.ಚನ್ನಬಸಪ್ಪ, ಶಾಸಕ

Shimoga Dasara 2024

ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಯಾವುದೇ ಸಮಾಜ, ಧರ್ಮದವರಾದರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ದೇವರು ಎಲ್ಲರಿಗು ಸುಖ, ಸಮೃದ್ಧಿ ನೀಡುತ್ತಾನೆ.ಬಲ್ಕಿಷ್‌ ಬಾನು, ವಿಧಾನ ಪರಿಷತ್‌ ಸದಸ್ಯೆ

Shimoga Dasara 2024

ಮೈಸೂರು, ಮಂಗಳೂರಿನಂತೆ ಶಿವಮೊಗ್ಗ ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ನೆಗೆಟಿವ್ ಎನರ್ಜಿ ತೊಡೆದು, ಪಾಸಿಟಿವ್ ಎನರ್ಜಿ ಪಡೆಯುವುದೆ ಹಬ್ಬದ ಉದ್ದೇಶ.ಹೆಚ್‌.ಎಸ್.ಸುಂದರೇಶ್‌, ಸೂಡಾ ಅಧ್ಯಕ್ಷ

Shimoga Dasara 2024

ಶಿವಮೊಗ್ಗದಲ್ಲಿ ದಸರಾ ಕಾರ್ಯಕ್ರಮಗಳು

ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ದಸರಾದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಕವಿಗೋಷ್ಠಿ, ಪುಟಾಣಿ ಮಕ್ಕಳಿಂದ ನೃತ್ಯ ವೈಭವ. ದಾಕ್ಷಾಯಿಣಿ ರಾಜ್‌ ಕುಮಾರ್‌ ಮತ್ತು ಸಂಗಡಿಗರು, ವಿದ್ಯಾ ಎಸ್‌ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.

Shimoga Dasara 2024

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಈವರೆಗಿನ ಟಾಪ್‌ 10 ಸುದ್ದಿಗಳು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 3, 2024

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment