ಶಿವಮೊಗ್ಗ ದಸರಾದಲ್ಲಿ ಇವತ್ತು ಏನೆಲ್ಲ ಕಾರ್ಯಕ್ರಮವಿದೆ? ಇಲ್ಲಿದೆ ಲಿಸ್ಟ್

DASARA NEWS, 5 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯಾವೆಲ್ಲ ಕಾರ್ಯಕ್ರಮಗಳು ಎಲ್ಲೆಲ್ಲಿ ಎಷ್ಟು ಹೊತ್ತಿಗೆ ಆರಂಭವಾಗಲಿದೆ. ಇಲ್ಲಿದೆ ಪಟ್ಟಿ.

ಇವತ್ತಿನ ಕಾರ್ಯಕ್ರಮದ ವಿವರ

ರೈತ ದಸರಾ ಜಾಥಾ | ಸ್ಥಳ : ಸೈನ್ಸ್‌ ಮೈದಾನದಿಂದ | ಸಮಯ : ಬೆಳಗ್ಗೆ 9ಕ್ಕೆ | ಎತ್ತಿನಗಾಡಿ, ಟ್ರ್ಯಾಕ್ಟರ್‌, ಟಿಲ್ಲರ್‌ ಜಾಥಾ. ಪ್ರಗತಿಪರ ರೈತ ಜಯಪ್ರಕಾಶ್‌ ಅವರಿಂದ ಉದ್ಘಾಟನೆ.

ಚಲನಚಿತ್ರ ರಸಗ್ರಹಣ ಕಾರ್ಯಾಗಾರ | ಸ್ಥಳ : ಡಾ. ಅಂಬೇಡ್ಕರ್‌ ಭವನ |ಸಮಯ : ಬೆಳಗ್ಗೆ 10ಕ್ಕೆ | ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಅವರಿಂದ ಉದ್ಘಾಟನೆ. ಕಿರುಚಿತ್ರ ನಿರ್ಮಾಣ, ಚಲನಚಿತ್ರ ಛಾಯಾಗ್ರಹಣ ಕುರಿತು ಸಂವಾದ.

021024 shimoga dasara news general image

ರೈತ ದಸರಾ ವೇದಿಕೆ ಕಾರ್ಯಕ್ರಮ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಬೆಳಗ್ಗೆ 11 ಗಂಟೆಗೆ | ಪ್ರಗತಿಪರ ರೈತ ಟಿ.ಎನ್‌.ರಮೇಶ್‌ ಅವರಿಂದ ಉದ್ಘಾಟನೆ. ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ.

Kalleshwara-Enterprises.webp

ಮಕ್ಕಳ ದಸರಾ ಸಮಾರೋಪ | ಸ್ಥಳ : ಡಾ. ಅಂಬೇಡ್ಕರ್‌ ಭವನ | ಸಮಯ : ಸಂಜೆ 5ಕ್ಕೆ | ರಾಷ್ಟ್ರಮಟ್ಟದ ಚೆಸ್‌ ಆಟಗಾರ ಸಮರ್ಥ್‌ ಪೂಜಾರ್‌ ಅವರಿಂದ ಉದ್ಘಾಟನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ. ಮಕ್ಕಳ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ.

ರಂಗ ದಸರಾ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಸಂಜೆ 5.30ಕ್ಕೆ | ರಂಗ ನಿರ್ದೇಶಕ ಮಂಜು ಕೊಡಗು ಅವರಿಂದ ರಂಗ ಛಾಯಾಚಿತ್ರ ಪ್ರದರ್ಶನ ಮತ್ತು ರಂಗ ದಸರಾ ಉದ್ಘಾಟನೆ.

ರಂಗ ಗೀತೆ ಗಾಯನ ತರಬೇತಿ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಸಂಜೆ 7.30ಕ್ಕೆ | ರಂಗ ಗೀತೆ ಗಾಯಕಿ ನಾಗರಾತ್ನ ಅವರಿಂದ ಚಾಲನೆ. ಅಜಯ್‌ ನೀನಾಸಂ ಮತ್ತು ಚಂದ್ರಶೇಖರ್‌ ಹಿರೆಗೋಣಿಗೆರೆಹಳ್ಳಿ ಅವರಿಂದ ನಿರ್ದೇಶನ. ‌‌

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ : ಸಂಜೆ 5.30ಕ್ಕೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನೆ | ಸಂಜೆ. 6.30ಕ್ಕೆ ಅಗಜೆ ಸಂಗೀತ ವಿದ್ಯಾಲಯದ ವಿದುಷಿ ಅನುಶ್ರೀ ಅರ್ಪಿತ್‌ ಮತ್ತು ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮ ಇರಲಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ತಾಪಮಾನ ಹೆಚ್ಚಳ, ಮಳೆ ಆಗಲಿದೆಯಾ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment