ಶಿವಮೊಗ್ಗ ಜಿಲ್ಲೆ, ಇವತ್ತು ಭಾರಿ ಮಳೆ ಸಾಧ್ಯತೆ, ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

WEATHER NEWS, 14 OCTOBER 2024 : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಇವತ್ತು ಕೂಡ ವಿವಿಧೆಡೆ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ವ್ಯಾಪಕ ಮಳೆಯಿಂದಾಗಿ ತಾಪಮಾನ ತುಸು ತಗ್ಗಿದೆ. ವಾತಾವರಣವು ತಂಪಾಗಿದೆ.

ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮಧ್ಯಾಹ್ನದ ವೇಳೆಗೆ ಭಾರಿ ಮಳೆಯ ಸಾಧ್ಯತೆ ಇದೆ. ಸಂಜೆಯು ಮಳೆ ಮುಂದುವರೆಯಲಿದೆ.

ತೀರ್ಥಹಳ್ಳಿ ತಾಲೂಕು ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮಧ್ಯಾಹ್ನದ ವೇಳೆಗೆ ಭಾರಿ ಮಳೆಯಾಗಲಿದೆ. ಸಂಜೆ ಹೊತ್ತಿಗು ಮಳೆ ಇರಲಿದೆ.

ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮೋಡ ಕವಿದ ವಾತಾವರಣ, ಮಧ್ಯಾಹ್ನದ ವೇಳೆಗೆ ಭಾರಿ ಮಳೆ ಸಾಧ್ಯತೆ. ಸಂಜೆ ವೇಳೆಯು ಮಳೆ ಮುಂದುವರೆಯಲಿದೆ.

ಇದನ್ನೂ ಓದಿ » ಸಿಗಂದೂರಿಗೆ ತೆರಳುತ್ತಿದ್ದ ಕಾರು ಅಪಘಾತ, ಬೆಂಗಳೂರಿನ ಯುವಕ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment