CCTVಯಲ್ಲಿ ಮುಖ ಕಾಣದಂತೆ ಛತ್ರಿ ಅಡ್ಡಿ ಹಿಡಿದು ಬಂದು ಕಾರು ಕಳ್ಳತನ

SHIMOGA NEWS, 20 OCTOBER 2024 : CCTV ಕ್ಯಾಮರಾಗೆ ಮುಖ ಕಾಣದಂತೆ ಛತ್ರಿ ಅಡ್ಡ ಹಿಡಿದು ಕಳ್ಳನೊಬ್ಬ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಿಂದ ಕಾರು ಕಳವು ಮಾಡಿದ್ದಾನೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಲ್ಲಿ ಘಟನೆ ಸಂಭವಿಸಿದೆ.

ಯುಸುಫ್‌ ಖಾನ್‌ ಎಂಬುವವರಿಗೆ ಸೇರಿದ ಸಕೆಂಡ್‌ ಹ್ಯಾಂಡ್‌ ಕಾರು ಶೋ ರೂಂನಲ್ಲಿ ಎರಟಿಗಾ ಕಾರನ್ನು ಮಾರಾಟಕ್ಕೆ ಇಡಲಾಗಿತ್ತು. ಅ.14ರ ರಾತ್ರಿ ಕಳ್ಳನೊಬ್ಬ ಕಾರು ಶೋ ರೂಂನ ಹಿಂಬದಿಯಿಂದ ಒಳ ನುಗ್ಗಿದ್ದ. ಸಿಸಿಟಿವಿಯಲ್ಲಿ ಮುಖ ಕಾಣಬಾರದು ಅಂತಾ ಛತ್ರಿ ಅಡ್ಡ ಹಿಡಿದು ಶೋ ರೂಂನಲ್ಲಿ ಓಡಾಡಿದ್ದ.

Kote Police station building

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ, ರಸ್ತೆಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

ಬಳಿಕ ಕೀಗಳಿರುವ ಬಾಕ್ಸ್‌ನಿಂದ ಕಳ್ಳ ಕಾರಿನ ಕೀ ತೆಗೆದುಕೊಂಡಿದ್ದ. ಎರಿಟಿಗಾ ಕಾರಿನ ಮುಂದೆ ಇದ್ದ ಒಂದು ಕಾರನ್ನು ಹೊರಗೆ ನಿಲ್ಲಿಸಿ, ಬಳಿಕ ಎರಿಟಿಗಾ ಕಾರನ್ನು ಕೊಂಡಿಯ್ದಿದ್ದಾನೆ. ಮರುದಿನ ಬೆಳಗ್ಗೆ ಶೋ ರೂಂಗೆ ಸಿಬ್ಬಂದಿಗಳು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

crime name image

Leave a Comment