ಬಸ್‌ ಹತ್ತುವಾಗ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆ

SHIKARIPURA NEWS, 23 OCTOBER 2024 : ಬಸ್‌ ಹತ್ತುವಾಗ ಮಹಿಳೆಯೊಬ್ಬರ (woman) ಕೊರಳಲ್ಲಿದ್ದ ಚಿನ್ನ ಸರವನ್ನು ಆಕೆಗೆ ಗೊತ್ತಾಗದ ಹಾಗೆ ಕಳ್ಳತನ ಮಾಡಲಾಗಿದೆ. ಶಿಕಾರಿಪುರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 26 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸತ್ಯಮ್ಮ ಎಂಬುವವರು ಶಿಕಾರಿಪುರದಿಂದ ಹೊನ್ನಾಳಿಗೆ ಹೊರಟಿದ್ದರು. ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ ಹತ್ತುವಾಗ ಸರ ಕಳ್ಳತನವಾಗಿದೆ. 2 ಲಕ್ಷ ರೂ. ಮೌಲ್ಯದ ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಇವತ್ತಿನ TOP 5 ಸುದ್ದಿಗಳು, ಓದಲು ಇಲ್ಲಿ ಕ್ಲಿಕ್‌ ಮಾಡಿ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

KSRTC-Bus-General-Image-Shimoga-Bangalore

Leave a Comment