ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 26 OCTOBER 2024 : ಗೃಹ ಸಚಿವ ಡಾ. ಜಿ.ಪರಮೇಶ್ವರ್ ಇವತ್ತು ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ (Surprise Visit) ನೀಡಿದ್ದರು. ಠಾಣೆಯ ಸುತ್ತಲು ಓಡಾಡಿ, ಕಡತಗಳನ್ನು ಪರಿಶೀಲಿಸಿ ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡುವುದರ ಜೊತೆಗೆ ತರಾಟೆಗೆ ತೆಗೆದುಕೊಂಡರು.
ಶಿವಮೊಗ್ಗದಿಂದ ಸಾಗರಕ್ಕೆ ತೆರಳುವ ಮಾರ್ಗ ಮಧ್ಯೆ ಕುಂಸಿ ಪೊಲೀಸ್ ಠಾಣೆಗೆ ಗೃಹ ಸಚಿವ ಡಾ. ಪರಮೇಶ್ವರ್ ಹಠಾತ್ ಭೇಟಿ ನೀಡಿದ್ದರು.
ಏನೆಲ್ಲ ಪರಿಶೀಲಿಸಿದರು? ಎನೆಲ್ಲ ಪ್ರಶ್ನಿಸಿದರು?
» ಪೊಲೀಸ್ ಠಾಣೆಯ ಒಳಾಂಗಣವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪರಿಶೀಲಿಸಿದರು. ಪ್ರತಿ ಕೊಠಡಿ, ಮೂಲ ಸೌಕರ್ಯ, ಟೇಬಲ್ ಮೇಲಿದ್ದ ಕಡತಗಳನ್ನು ಪರಿಶೀಲಿಸಿದರು. ಠಾಣೆಯಲ್ಲಿರುವ ಸೆಲ್‌ಗಳನ್ನು ವೀಕ್ಷಿಸಿದರು.
» ಅಪರಾಧ ಮತ್ತು ಠಾಣೆಯ ನಿರ್ವಹಣೆ ಸಂಬಂಧದ ಕಡತಗಳನ್ನು ಪರಿಶೀಲಿಸಿದರು. ಈ ಸಂದರ್ಭ ಠಾಣೆ ಸಿಬ್ಬಂದಿಗೆ ಕೆಲವು ಸಲಹೆ ನೀಡಿದರು. ಅಲ್ಲದೆ ಕೆಲವು ಕಡತಗಳನ್ನು ಸರಿಯಾಗಿ ನಿರ್ಹವಣೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
» ವಿವಿಧ ಪ್ರಕರಣ ಸಂಬಂಧ ಸೀಜ್ ಆಗಿರುವ ವಾಹನಗಳನ್ನು ವೀಕ್ಷಿಸಿದರು. ಇವುಗಳ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಸಿಡಿಮಿಡಿಗೊಂಡರು. ಇನ್ನು, ಠಾಣೆಯಲ್ಲಿರುವ ಕ್ರೈಮ್ ಟೇಬಲ್ ಅಪ್‌ಡೇಟ್ ಮಾಡದ್ದಕ್ಕೆ ಸಿಬ್ಬಂದಿಗೆ ತರಾಟೆಗೆಗೆ ತೆಗೆದುಕೊಂಡರು.
ಇಲ್ಲಿದೆ ವಿಡಿಯೋ
» ಬೀಟ್ ವ್ಯವಸ್ಥೆ, ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಹೆಚ್ಚುವರಿ ಕೊಠಡಿಗಳು ಮತ್ತು ಇತರೆ ಸೌಲಭ್ಯದ ಅಗತ್ಯತೆ ಕುರಿತು ಸಿಬ್ಬಂದಿ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ » ಲಿಂಗನಮಕ್ಕಿ ಚಲೋ, ಕಾರ್ಗಲ್‌ನಲ್ಲಿ ರೈತರು ಪೊಲೀಸ್ ವಶಕ್ಕೆ
ಈ ಸಂದರ್ಭ ಶಾಸಕರಾದ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಬಲ್ಕಿಶ್ ಬಾನು, ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕುಂಸಿ ಠಾಣೆ ಇನ್ಸ್‌ಪೆಕ್ಟರ್ ದೀಪಕ್ ಸೇರಿದಂತೆ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422