ಶಿವಮೊಗ್ಗ ಲೈವ್
SHIMOGA NEWS, 29 OCTOBER 2024 : ಮನೆ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಭಾನುವಾರ ಬೆಳಗಿನ ಜಾವ ಘಟನೆ ನಡೆದಿದ್ದು, ಪ್ರಕರಣ (Police) ದಾಖಲಾಗಿದೆ. ಲಷ್ಕರ್ ಮೊಹಲ್ಲಾದ ಅಗಸರ ಬೀದಿಯ ರೆಹಮತ್ ಎಂಬುವವರ ಮನೆ ಬಳಿ ನಿಲ್ಲಿಸಿದ್ದ ಬೈಕ್‌ಗಳು ಸುಟ್ಟು ಹೋಗಿವೆ. (ಈ ಸುದ್ದಿಯನ್ನು ಇನ್ನು 32 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಭಾನುವಾರ ಬೆಳಗಿನ ಜಾವ ಘಟನೆ ನಡೆದಿದೆ. ಇರ್ಫಾನ್ ಪಾಷಾ ಎಂಬುವವರಿಗೆ ಸೇರಿದ ಸುಜೂಕಿ ಆಕ್ಸಸ್, ಫಜಲ್ಲೂ ರೆಹಮಾನ್‌ಗೆ ಸೇರಿದ ಹೀರೋ ಮಾಸ್ಟರ್ ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನು ದಾಳಿ, 7 ಮಂದಿಗೆ ಗಾಯ
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
