ಬಸ್‌ ಹತ್ತಿ ತಾಯಿಯತ್ತ ತಿರುಗಿದ ಮಗಳಿಗೆ ಕಾದಿತ್ತು ಶಾಕ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA REPORT, 30 OCTOBER 2024 : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold) ಕಳ್ಳತನ ಮಾಡಲಾಗಿದೆ. ಬಸ್‌ ಹತ್ತಿ ಸೀಟಿನಲ್ಲಿ ಕುಳಿತಾಗ ಚಿನ್ನದ ಸರ ಕಳುವಾಗಿರುವುದು ಗೊತ್ತಾಗಿದೆ.

ನೂಕುನುಗ್ಗಲಲ್ಲಿ ಬಸ್‌ ಹತ್ತಿದ್ದರು

ಧಾರವಾಡದ ಮೆಹಬೂಬಿ ಮತ್ತು ಅವರ ತಾಯಿ, ಜಾವಗಲ್‌ನ ದರ್ಗಾದಿಂದ ತಮ್ಮೂರಿಗೆ ಮರಳುತ್ತಿದ್ದರು. ಶಿವಮೊಗ್ಗ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ಬರು, ನೂಕುನುಗ್ಗಲಿನಲ್ಲಿ ಹರಿಹರದ ಬಸ್‌ ಹತ್ತಿದ್ದರು. ಸೀಟಿನಲ್ಲಿ ಕುಳಿತಾಗ ಮೆಹಬೂಬಿ, ಪಕ್ಕದಲ್ಲಿ ಕುಳಿತಿದ್ದ ತಮ್ಮ ತಾಯಿಯ ಕಡೆಗೆ ನೋಡಿದಾಗ ಕೊರಳಲಿದ್ದ ಬಂಗಾರದ ಸರ ನಾಪತ್ತೆಯಾಗಿತ್ತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

KSRTC-Bus-Stand-Shivamogga

ಇದನ್ನೂ ಓದಿ » ಸಾಗರದ ಸಿರಿವಂತೆ ಚಂದ್ರಶೇಖರ್‌ಗೆ ರಾಜ್ಯೋತ್ಸವ ಪ್ರಶಸ್ತಿ

ಬಸ್‌ ಹತ್ತುವಾಗ, ನೂಕುನುಗ್ಗಲಿನ ನಡುವೆ ಮೆಹಬೂಬಿ ಅವರ ತಾಯಿಯ ಕೊರಳಿದ್ದ 45 ಸಾವಿರ ರೂ. ಮೌಲ್ಯದ 15 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment