ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
STATE NEWS, 15 NOVEMBER 2024 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ನ.20ರಂದು ಮದ್ಯದ ಮಾರಾಟ ಬಂದ್ (Bandh) ಮಾಡಲು ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಸಭೆ ಕರೆದು ಚರ್ಚಿಸಬೇಕು. ಇಲ್ಲವಾದಲ್ಲಿ ಮದ್ಯ ಮಾರಾಟ ಬಂದ್ ಮಾಡುವುದು ನಿಶ್ಚಿತ ಎಂದು ತಿಳಿಸಿದ್ದಾರೆ.
ಅಸೋಸಿಯೇಷನ್ ಬೇಡಿಕೆಗಳೇನು?
ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು. 2005ರ ಅಬಕಾರಿ ಕಾಯ್ದೆ ಕಲಂ 29 ರ ಪುನರ್ ವಿಮರ್ಶಿಸಿ ತಿದ್ದುಪಡಿ ತರಬೇಕು. ಸಿಎಲ್-2ನಲ್ಲಿ ಮದ್ಯ ಸೇವಿಸಲು ಅವಕಾಶ. ಸಿಎಲ್-9 ಹೆಚ್ಚುವರಿ ಶುಲ್ಕ ವಿಧಿಸಿ ಮದ್ಯ ಪಾರ್ಸಲ್ ನೀಡಲು ಕಾನೂನು ಅವಕಾಶ ನೀಡಬೇಕು.
ಇದನ್ನೂ ಓದಿ » ಶಿವಮೊಗ್ಗ ತಹಶೀಲ್ದಾರ್ ವರ್ಗಾವಣೆ, ಅನುಮಾನ ಮೂಡಿಸಿದ ನಡೆ
ಎಂಎಸ್ಐಎಲ್ ಲೈಸೆನ್ಸ್ ಕುರಿತು ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಬೇಕು. ನಕಲಿ ಮದ್ಯ ತಯಾರಕರು ಮತ್ತು ಕಳ್ಳಭಟ್ಟಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿಎಲ್8, ಸಿಎಲ್8ಎ ಮತ್ತು ಸಿಎಲ್8ಬಿ ಲೈಸೆನ್ಸ್ ಷರತ್ತುಗಳ ಪಾಲನೆಗೆ ಕ್ರಮ ವಹಿಸಬೇಕು. ಅನಗತ್ಯ ಲೈಸೆನ್ಸ್ ಮತ್ತು ಪೊಲೀಸ್ ಹಸ್ತಕ್ಷೇಪ ತಪ್ಪಿಸಬೇಕು. ಲೈಸೆನ್ಸ್ ರಹಿತ ಮದ್ಯ ಮಾರಾಟಗಾರರಿಗೆ ದಂಡ ಹೆಚ್ಚಿಸಬೇಕು. ಹಳ್ಳಿಗಳು, ಡಾಬಾ, ಮಾಂಸಹಾರ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ನೀಷೇಧಿಸಬೇಕು.